ಕರ್ನಾಟಕ

karnataka

By

Published : Jun 27, 2021, 2:28 PM IST

ETV Bharat / bharat

ಕೋವಿಡ್​ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯಬೇಡಿ: ಪ್ರಧಾನಿ ಮೋದಿ

ಕೊರೊನಾ ಲಸಿಕೆಗಳ ಬಗ್ಗೆ ವದಂತಿಗಳನ್ನು ಹರಡುವವರು ಹರಡುತ್ತಲೇ ಇರಲಿ. ಆದರೆ ದಯವಿಟ್ಟು ಅವರ ಮಾತಿಗೆ ನೀವು ಕಿವಿ ಕೊಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

PM Modi urges people to overcome COVID-19 vaccine hesitancy
ಪ್ರಧಾನಿ ಮೋದಿ

ನವದೆಹಲಿ:ದೇಶಾದ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ವ್ಯಾಕ್ಸಿನೇಷನ್​ ಅಭಿಯಾನದ ಆವೇಗವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೋವಿಡ್​ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯಬೇಡಿ ಎಂದು ರಾಷ್ಟ್ರದ ಜನತೆಯನ್ನು ಕೋರಿದ್ದಾರೆ.

74ನೇ ಆವೃತ್ತಿಯ 'ಮನ್ ಕಿ ಬಾತ್'ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ನಾವು ವೈರಸ್​ ವಿರುದ್ಧ ಹೋರಾಡುತ್ತಿದ್ದೇವೆ, ಅಲ್ಲದೇ ಈ ಹೋರಾಟದಲ್ಲಿ ಅನೇಕ ಅಸಾಧಾರಣ ಮೈಲಿಗಲ್ಲನ್ನು ಸಾಧಿಸಿದ್ದೇವೆ. ಜೂನ್ 21 ರಂದು ಭಾರತವು ಒಂದು ದಿನದಲ್ಲಿ 86 ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ಲಸಿಕೆ ನೀಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ ಎಂದರು.

ಇದನ್ನೂ ಓದಿ: ದೇಶದಲ್ಲಿ 50,040 ಹೊಸ ಕೋವಿಡ್​ ಕೇಸ್​ ಪತ್ತೆ.. 1,258 ಸೋಂಕಿತರು ಸಾವು

ಲಸಿಕೆಗಳ ಬಗ್ಗೆ ವದಂತಿಗಳನ್ನು ಹರಡುವವರು ಹರಡುತ್ತಲೇ ಇರಲಿ. ಆದರೆ ದಯವಿಟ್ಟು ಅವರ ಮಾತಿಗೆ ನೀವು ಕಿವಿ ಕೊಡಬೇಡಿ. ನಾನು ಲಸಿಕೆಯ ಎರಡೂ ಡೋಸ್​ಗಳನ್ನು ತೆಗೆದುಕೊಂಡಿದ್ದೇನೆ. ನನ್ನ ತಾಯಿಗೆ ಸುಮಾರು ನೂರು ವರ್ಷ, ಅವರೂ ಎರಡೂ ಡೋಸ್​ ಪಡೆದಿದ್ದಾರೆ. ಭಾರತದಲ್ಲಿ ಅನೇಕ ಗ್ರಾಮಗಳ ಶೇ. 100 ರಷ್ಟು ಗ್ರಾಮಸ್ಥರು ವ್ಯಾಕ್ಸಿನ್​ ಹಾಕಿಸಿಕೊಂಡಿದ್ದಾರೆ. ಲಸಿಕೆಗಳಿಗೆ ಸಂಬಂಧಿಸಿದ ಯಾವುದೇ ತಪ್ಪು ಮಾಹಿತಿಯನ್ನು ನಂಬಬೇಡಿ ಎಂದು ಮೋದಿ ಮನವಿ ಮಾಡಿದರು.

ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ದುಲಾರಿಯಾ ಗ್ರಾಮದ ಇಬ್ಬರು ಗ್ರಾಮಸ್ಥರೊಂದಿಗೆ ಮಾತನಾಡಿದ ಪಿಎಂ ಮೋದಿ, ವ್ಯಾಕ್ಸಿನ್​ ಕುರಿತ ಅವರ ಅನುಮಾನಗಳನ್ನು ಬಗೆಹರಿಸಿ ಲಸಿಕೆ ಪಡೆಯುಂತೆ ವಿನಂತಿಸಿದರು. ವಿಜ್ಞಾನ- ವಿಜ್ಞಾನಿಗಳನ್ನು ನಂಬುವಂತೆ ಹಾಗೂ ವ್ಯಾಕ್ಸಿನೇಷನ್​ ಜೊತೆಗೆ ಕೋವಿಡ್​ ಮಾನದಂಡಗಳನ್ನು ಪಾಲಿಸುವಂತೆ ದೇಶದ ಜನತೆಗೆ ಮೋದಿ ತಿಳಿಸಿದರು.

ABOUT THE AUTHOR

...view details