ಕರ್ನಾಟಕ

karnataka

ETV Bharat / bharat

ಇಂದು ಜನೌಷಧಿ ದಿನ: 'ಮೋದಿ ಅಂಗಡಿ'ಯಿಂದ ಕೈಗೆಟಕುವ ದರದಲ್ಲಿ ಔಷಧಿ ಪಡೆಯಿರಿ ಎಂದ ಪ್ರಧಾನಿ - Jan Aushadhi

ಜನೌಷಧಿ ಕೇಂದ್ರಗಳಲ್ಲಿ ಹೆಣ್ಣುಮಕ್ಕಳಿಗೆ ಎರಡೂವರೆ ರೂಪಾಯಿಗೆ ಒಂದು ಸ್ಯಾನಿಟರಿ ಪ್ಯಾಡ್ ಸಿಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Janaushadhi Kendras
ಜನೌಷಧಿ ದಿನ

By

Published : Mar 7, 2021, 11:27 AM IST

Updated : Mar 7, 2021, 12:02 PM IST

ನವದೆಹಲಿ:ಇಂದು ಜನೌಷಧಿ ದಿನದ ಹಿನ್ನೆಲೆ ಮೇಘಾಲಯದ ಶಿಲ್ಲಾಂಗ್​​ನಲ್ಲಿ ದೇಶದ 7,500ನೇ ಜನೌಷಧಿ ಕೇಂದ್ರವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಪಿಎಂ ಮೋದಿ, ಇಂದು ಔಷಧಿಗಳು ದುಬಾರಿಯಾಗಿವೆ. ಅದಕ್ಕಾಗಿಯೇ ನಾವು ಬಡವರಿಗೆ ಸಹಾಯವಾಗಲೆಂದು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆ ಆರಂಭಿಸಿದ್ದೇವೆ. ಜನರೇ ಜನೌಷಧಿ ಕೇಂದ್ರಗಳನ್ನು ಪ್ರೀತಿಯಿಂದ 'ಮೋದಿಯ ಅಂಗಡಿ' (Modi ji ki dukaan) ಎಂದು ಕರೆಯುತ್ತಾರೆ. ಮೋದಿ ಅಂಗಡಿಯಲ್ಲಿ ಕೈಗೆಟುಕುವ ದರದಲ್ಲಿ ಔಷಧಿಗಳನ್ನು ಖರೀದಿಸಿ ಎಂದು ಜನರಲ್ಲಿ ಮನವಿ ಮಾಡಿದರು.

2.5ರೂ.ಗೆ ಸ್ಯಾನಿಟರಿ ಪ್ಯಾಡ್​​

ಜನೌಷಧಿ ಕೇಂದ್ರಗಳಲ್ಲಿ 75 ಬಗೆಯ ಆಯುಷ್​​ ಔಷಧಿಗಳು ಲಭ್ಯ. ಅನೇಕ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದೆ. 1000 ಜನೌಷಧಿ ಕೇಂದ್ರಗಳನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಹೆಣ್ಣುಮಕ್ಕಳಿಗೆ ಇಲ್ಲಿ ಕೇವಲ ಎರಡೂವರೆ ರೂಪಾಯಿಗೆ ಒಂದು ಸ್ಯಾನಿಟರಿ ಪ್ಯಾಡ್​ ಸಿಗುತ್ತದೆ. ಈವರೆಗೆ ಒಟ್ಟು 11 ಕೋಟಿ ಸ್ಯಾನಿಟರಿ ನ್ಯಾಪ್ಕಿನ್​ಗಳನ್ನ ಮಾರಾಟ ಮಾಡಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

Last Updated : Mar 7, 2021, 12:02 PM IST

ABOUT THE AUTHOR

...view details