ಹೈದರಾಬಾದ್ :ದೇಶ ಕಂಡ ಮಹಾನ್ ನಾಯಕ, ಅಜಾತ ಶತ್ರುಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿವರ 96ನೇ ಜನ್ಮ ಇಂದು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ.
"ದೇಶವನ್ನು ಅಭೂತಪೂರ್ವ ಅಭಿವೃದ್ಧಿಯ ಎತ್ತರಕ್ಕೆ ಕೊಂಡೊಯ್ದವರು ವಾಜಪೇಯಿಯವರು. ಬಲವಾದ ಮತ್ತು ಸಮೃದ್ಧ ಭಾರತ ನಿರ್ಮಿಸುವ ಅವರ ಪ್ರಯತ್ನಗಳನ್ನು ಯಾವಾಗಲೂ ನೆನಪಿಸಿಕೊಳ್ಳಲಾಗುವುದು" ಎಂದು ಪ್ರಧಾನಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಭಾರತೀಯ ವಿದ್ವಾಂಸ ಪಂಡಿತ್ ಮದನ್ ಮೋಹನ ಮಾಳವೀಯ ಅವರ ಜನ್ಮದಿನವೂ ಇಂದೇ ಆಗಿದ್ದು, ಪ್ರಧಾನಿ ಮೋದಿ ಅವರ ಸಾಧನೆಗಳನ್ನು ಸ್ಮರಿಸಿದ್ದಾರೆ. "ಕಾಶಿ ಹಿಂದೂ ವಿಶ್ವವಿದ್ಯಾಲಯದ ಪ್ರವರ್ತಕ ಮತ್ತು ಶ್ರೇಷ್ಠ ಬಹುಶಿಸ್ತೀಯ ಪ್ರತಿಭೆ ಪಂಡಿತ್ ಮದನ್ ಮೋಹನ್ ಮಾಳವಿಯಾ ಜಿ ಅವರಿಗೆ ನನ್ನ ಗೌರವ ಸಮರ್ಪಣೆ.
ಅವರು ತಮ್ಮ ಇಡೀ ಜೀವನವನ್ನು ಸಾಮಾಜಿಕ ಸುಧಾರಣೆ ಮತ್ತು ರಾಷ್ಟ್ರ ಸೇವೆಗಾಗಿ ಮೀಸಲಿಟ್ಟರು. ದೇಶಕ್ಕಾಗಿ ಅವರ ಕೊಡುಗೆ ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತದೆ" ಎಂದಿದ್ದಾರೆ. ಅತ್ಯುತ್ತಮ ಆಡಳಿತದಿಂದ ಛಾಪು ಮೂಡಿಸಿದ್ದ ದೇಶದ ಮಾಜಿ ಪ್ರಧಾನಮಂತ್ರಿ ವಾಜಪೇಯಿ ಅವರ ಜನ್ಮದಿನವನ್ನು ಗುಡ್ ಗವರ್ನೆನ್ಸ್ ಡೇ ಎಂದು ಆಚರಿಸಲಾಗುತ್ತಿದ್ದು, ಇಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.