ನವದೆಹಲಿ: ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತದಲ್ಲಲ್ಲದೇ ಜಾಗತಿಕವಾಗಿಯೂ ಹೆಚ್ಚು ಹೆಸರಾಗಿದ್ದಾರೆ. ಈ ಕಾರಣಕ್ಕೆ ಹಲವಾರು ಸರ್ವೇಗಳಲ್ಲಿ ಮೊದಲ ಸ್ಥಾನದಲ್ಲಿ ಅವರ ಹೆಸರು ಕೇಳಿಬರುತ್ತಿದೆ. ಈಗ ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯ ಪ್ರಕಾರ, ಪ್ರಧಾನಿ ಮೋದಿಗೆ ಮತ್ತೆ ಮೊದಲ ಸ್ಥಾನ ದೊರೆತಿದೆ.
ಪ್ರಧಾನಿ ಮೋದಿಯ ನಂತರ ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಮತ್ತು ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಗಿ ಕ್ರಮವಾಗಿ 63 ಮತ್ತು 54 ರಷ್ಟು ರೇಟಿಂಗ್‌ಗಳೊಂದಿಗೆ ಎರಡನೇ ಮತ್ತು ಮೂರನೇ ಸ್ಥಾನ ಸಿಕ್ಕಿದೆ.
22 ವಿಶ್ವ ನಾಯಕರನ್ನು ಒಳಗೊಂಡಿರುವ ಈ ಪಟ್ಟಿಯಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್ 41 ಪ್ರತಿಶತ ರೇಟಿಂಗ್‌ನೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಬೈಡೆನ್ ನಂತರ ಕೆನಡಾಧ್ಯಕ್ಷ ಜಸ್ಟಿನ್ ಟ್ರುಡೊ 39 ಪ್ರತಿಶತ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ 38 ಪ್ರತಿಶತ ರೇಟಿಂಗ್ ಪಡೆದುಕೊಂಡಿದ್ದಾರೆ.
ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಪ್ರಸ್ತುತ ಆಸ್ಟ್ರೇಲಿಯಾ, ಆಸ್ಟ್ರಿಯಾ, ಬ್ರೆಜಿಲ್, ಜರ್ಮನಿ, ಭಾರತ, ಮೆಕ್ಸಿಕೋ, ನೆದರ್ಲ್ಯಾಂಡ್ಸ್, ದಕ್ಷಿಣ ಕೊರಿಯಾ, ಸ್ಪೇನ್, ಸ್ವೀಡನ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿನ ನಾಯಕರಿಗೆ ಸಂಬಂಧಿಸಿದಂತೆ ಈ ಫಲಿತಾಂಶ ನೀಡಿದೆ. ಇದಕ್ಕೂ ಮೊದಲು ಜನವರಿ 2022 ರಲ್ಲಿ ಮತ್ತು ನವೆಂಬರ್ 2021 ರಲ್ಲಿ ಪ್ರಧಾನಿ ಮೋದಿ ಅವರೇ ಅತ್ಯಂತ ಜನಪ್ರಿಯ ವಿಶ್ವ ನಾಯಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು.
ಇದನ್ನೂ ಓದಿ:ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಮುಖ ಸುಧಾರಣೆಗಳ ಶ್ರೀಕಾರ ಹಾಕಿದ ನ್ಯಾಯಮೂರ್ತಿ ರಮಣ