ನವದೆಹಲಿ: ಜೂನ್ 28ರಂದು ಯುಎಇಗೆ ಮೋದಿ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಯುಎಇ ಮಾಜಿ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ಅವರ ನಿಧನಕ್ಕೆ ಸಂತಾಪ ಸೂಚಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಹೇಳಿದ್ದಾರೆ.
G7 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಮೋದಿ ಯುಎಇಗೆ ಭೇಟಿ ನೀಡಲಿದ್ದಾರೆ : ವಿದೇಶಾಂಗ ಕಾರ್ಯದರ್ಶಿ
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 28ರಂದು ಯುಎಇಗೆ ಭೇಟಿ ನೀಡಲಿದ್ದಾರೆ. ಮಾಜಿ ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ನಿಧನಕ್ಕೆ ಸಂತಾಪ ಸೂಚಿಸಲಿದ್ದಾರೆ..
G7 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಮೋದಿ ಯುಎಇಗೆ ಭೇಟಿ ನೀಡಲಿದ್ದಾರೆ: ವಿದೇಶಾಂಗ ಕಾರ್ಯದರ್ಶಿ
ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಪ್ರಧಾನಿ ಅವರು ಯುಎಇ ಮಾಜಿ ಅಧ್ಯಕ್ಷ ಮತ್ತು ಅಬುಧಾಬಿ ಆಡಳಿತಗಾರ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನಕ್ಕೆ ವೈಯಕ್ತಿಕ ಸಂತಾಪ ಸೂಚಿಸಲಿದ್ದಾರೆ ಎಂದರು. ಯುಎಇಯ ಹೊಸ ಅಧ್ಯಕ್ಷರಾಗಿ ಮತ್ತು ಅಬುಧಾಬಿಯ ಆಡಳಿತಗಾರರಾಗಿ ಆಯ್ಕೆಯಾದ ನಂತರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಪ್ರಧಾನಿಯವರ ಮೊದಲ ಸಭೆ ಇದಾಗಿರಲಿದೆ.
ಇದನ್ನೂ ಓದಿ: ತೆರೆ ಹಿಂದೆ ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಹಾನಾಟಕ : ಗೆದ್ದೇ ಗೆಲ್ಲುತ್ತೇನೆಂಬ ಛಲದಲ್ಲಿ ಬಿಜೆಪಿ!