ನವದೆಹಲಿ/ಚೆನ್ನೈ:ಪ್ರಧಾನಿ ನರೇಂದ್ರ ಮೋದಿ ಇಂದು ತಮಿಳುನಾಡಿಗೆ ಭೇಟಿ ನೀಡಿದ್ದು, ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ.
ಈಗಾಗಲೇ ಚೆನ್ನೈಗೆ ಬಂದಿಳಿದಿರುವ ಪ್ರಧಾನಿ ಬೆಳಗ್ಗೆ 11: 15 ರ ಸುಮಾರಿಗೆ ತಮಿಳುನಾಡಿನಲ್ಲಿ ಹಲವು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ. ಬಳಿಕ ಚೆನ್ನೈನಲ್ಲಿರುವ ಅರ್ಜುನ್ ಮುಖ್ಯ ಯುದ್ಧ ಟ್ಯಾಂಕ್ (ಎಂಕೆ -1 ಎ) ಅನ್ನು ಸೈನ್ಯಕ್ಕೆ ಹಸ್ತಾಂತರಿಸಲಿದ್ದಾರೆ. ಮಧ್ಯಾಹ್ನ 3:30 ರ ಸುಮಾರಿಗೆ ಅವರು ಕೊಚ್ಚಿಯಲ್ಲಿ ವಿವಿಧ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ.
ಇಂದು ಮೊದಲ ಹಂತದ ಮೆಟ್ರೋ ರೈಲಿನ ವಿಸ್ತರಣೆಯನ್ನು ಮೋದಿ ಉದ್ಘಾಟಿಸಲಿದ್ದಾರೆ. ಇದು ಚೆನ್ನೈ ಬೀಚ್ ಮತ್ತು ಅಟ್ಟಿಪಟ್ಟು ನಡುವಿನ ನಾಲ್ಕನೇ ರೈಲ್ವೆ ಮಾರ್ಗವಾಗಿದೆ. ವಿಲ್ಲುಪುರಂ - ಕಡಲೂರು - ಮೈಲಾಡುತುರೈ - ತಂಜಾವೂರು ಮತ್ತು ಮಯಿಲಾಡುತುರೈ-ತಿರುವರೂರುಗಳಲ್ಲಿ ಏಕ ಸಾಲಿನ ವಿಭಾಗದ ರೈಲ್ವೆ ವಿದ್ಯುದ್ದೀಕರಣವನ್ನು ಉದ್ಘಾಟಿಸಲಿದ್ದಾರೆ.
ಗ್ರ್ಯಾಂಡ್ ಅನಿಕಟ್ ಕಾಲುವೆ ವ್ಯವಸ್ಥೆಯ ವಿಸ್ತರಣೆ, ನವೀಕರಣ ಮತ್ತು ಆಧುನೀಕರಣಕ್ಕೆ ಅವರು ಅಡಿಪಾಯ ಹಾಕಲಿದ್ದಾರೆ. ಡೆಲ್ಟಾ ಜಿಲ್ಲೆಗಳಲ್ಲಿ ನೀರಾವರಿಗಾಗಿ ಈ ಕಾಲುವೆ ಬಹು ಮುಖ್ಯವಾಗಿದೆ. ಈ ಕಾಲುವೆಯ ಆಧುನೀಕರಣವನ್ನು 2,640 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಇದು ಕಾಲುವೆಗಳ ನೀರು ಸಾಗಿಸುವ ಸಾಮರ್ಥ್ಯದಲ್ಲಿ ಸುಧಾರಣೆಗೆ ಕಾರಣವಾಗುತ್ತದೆ.
ಅಲ್ಲದೆ ಐಐಟಿ ಮದ್ರಾಸ್‌ನ ಡಿಸ್ಕವರಿ ಕ್ಯಾಂಪಸ್‌ಗೆ ಪಿಎಂ ಮೋದಿ ಅಡಿಪಾಯ ಹಾಕಲಿದ್ದಾರೆ. 2 ಲಕ್ಷ ಚದರ್ ಮೀಟರ್ ವಿಸ್ತೀರ್ಣದಲ್ಲಿ ಮೊದಲ ಹಂತದಲ್ಲಿ 1000 ಕೋಟಿ ರೂ. ವೆಚ್ಚದಲ್ಲಿ ಚೆನ್ನೈ ಬಳಿಯ ಥೈಯೂರ್‌ನಲ್ಲಿ ಕ್ಯಾಂಪಸ್ ನಿರ್ಮಿಸಲಾಗುತ್ತದೆ.
ಬಳಿಕ ಕೇರಳ ಪ್ರವಾಸ ಕೈಗೊಳ್ಳುವ ಪ್ರಧಾನಿ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ನ ಪ್ರೊಪೈಲೀನ್ ಡೆರಿವೇಟಿವ್ ಪೆಟ್ರೋಕೆಮಿಕಲ್ ಪ್ರಾಜೆಕ್ಟ್ (ಪಿಡಿಪಿಪಿ) ಯನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ಕೊಚ್ಚಿನ್‌ನ ವಿಲ್ಲಿಂಗ್ಡನ್ ದ್ವೀಪಗಳಲ್ಲಿ ರೋ-ರೋ ಹಡಗುಗಳು, ಕೊಚ್ಚಿನ್ ಬಂದರಿನಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್ "ಸಾಗರಿಕಾ" ಸಾಗರ ಎಂಜಿನಿಯರಿಂಗ್ ತರಬೇತಿ ಸಂಸ್ಥೆ, ವಿಜಯಾನ ಸಾಗರ್, ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಮತ್ತು ಕೊಚ್ಚಿನ್ ಬಂದರಿನಲ್ಲಿ ದಕ್ಷಿಣ ಕಲ್ಲಿದ್ದಲು ಬೆರ್ತ್‌ನ ಪುನರ್ನಿರ್ಮಾಣದ ಅಡಿಪಾಯವನ್ನು ಹಾಕಲಿದ್ದಾರೆ.
ಈ ಯೋಜನೆಗಳು ಆ ರಾಜ್ಯಗಳ ಬೆಳವಣಿಗೆಯ ಪಥಕ್ಕೆ ನಿರ್ಣಾಯಕ ವೇಗವನ್ನು ನೀಡುತ್ತವೆ. ಅಭಿವೃದ್ಧಿಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವ ವೇಗವನ್ನು ತ್ವರಿತಗೊಳಿಸಲು ಈ ಯೋಜನೆಗಳು ಸಹಾಯ ಮಾಡುತ್ತವೆ ಎಂದು ಪ್ರಧಾನ ಮಂತ್ರಿ ಕಚೇರಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.