ಕರ್ನಾಟಕ

karnataka

ETV Bharat / bharat

ಜುಲೈ 14 ರಂದು ಪ್ರಧಾನಿ ಮೋದಿ ಫ್ರಾನ್ಸ್​ ಭೇಟಿ: ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾಗಿ

ಈ ವರ್ಷದ ಜುಲೈ 14 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಫ್ರಾನ್ಸ್​ಗೆ ಭೇಟಿ ನೀಡಲಿದ್ದಾರೆ. ಪ್ಯಾರಿಸ್‌ನಲ್ಲಿ ನಡೆಯಲಿರುವ ಈ ವರ್ಷದ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಅತಿಥಿಯಾಗಿ ಅವರು ಭಾಗವಹಿಸಲಿದ್ದಾರೆ.

ಜುಲೈ 14 ರಂದು ಪ್ರಧಾನಿ ಮೋದಿ ಫ್ರಾನ್ಸ್​ ಭೇಟಿ: ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾಗಿ
ಜುಲೈ 14 ರಂದು ಪ್ರಧಾನಿ ಮೋದಿ ಫ್ರಾನ್ಸ್​ ಭೇಟಿ: ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾಗಿ

By

Published : May 5, 2023, 5:24 PM IST

ನವದೆಹಲಿ : ಭಾರತ-ಫ್ರಾನ್ಸ್ ದ್ವಿಪಕ್ಷೀಯ ಸಂಬಂಧಗಳ 25 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ವರ್ಷದ ಜುಲೈ 14 ರಂದು ಪ್ಯಾರಿಸ್‌ನಲ್ಲಿ ನಡೆಯಲಿರುವ ಈ ವರ್ಷದ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ಯಾರಿಸ್‌ನಲ್ಲಿ ನಡೆಯಲಿರುವ ಪರೇಡ್‌ನಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಮೋದಿಯವರನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆಹ್ವಾನಿಸಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳು ಫ್ರೆಂಚ್ ಸಶಸ್ತ್ರ ಪಡೆಗಳೊಂದಿಗೆ ಪರೇಡ್‌ನಲ್ಲಿ ಭಾಗವಹಿಸಲಿವೆ.

ಪ್ರಧಾನಿ ಮೋದಿಯವರ ಭೇಟಿಯು ನಮ್ಮ ಕಾರ್ಯತಂತ್ರ, ಸಾಂಸ್ಕೃತಿಕ, ವೈಜ್ಞಾನಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಹೊಸ ಮತ್ತು ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿಸುವ ಮೂಲಕ ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯ ಮುಂದಿನ ಘಟ್ಟಕ್ಕೆ ನಾಂದಿ ಹಾಡುವ ನಿರೀಕ್ಷೆಯಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

1789 ರ ಫ್ರೆಂಚ್ ಕ್ರಾಂತಿಯನ್ನು ಸಂಕೇತಿಸುವ ಕೋಟೆಯ ಪತನದ ನಂತರ ಆ ದಿನವನ್ನು ಬಾಸ್ಟಿಲ್ ಡೇ ಎಂದು ಹೆಸರಿಸಲಾಗಿದೆ. ಪ್ಯಾರಿಸ್‌ನಲ್ಲಿನ ಈ ವಿಶಿಷ್ಟ ಆಚರಣೆಯು ಚಾಂಪ್ಸ್ ಎಲಿಸೀಸ್ ಅವೆನ್ಯೂದಲ್ಲಿ ಮಿಲಿಟರಿ ಪರೇಡ್ ಮತ್ತು ರಾಜಧಾನಿಯ ಮೇಲೆ ಹಾರುವ ವಾಯುಪಡೆಯ ಜೆಟ್‌ಗಳನ್ನು ಒಳಗೊಂಡಿರುತ್ತದೆ. ನಮ್ಮ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪರೇಡ್‌ನಂತೆಯೇ ಇರುತ್ತದೆ. ಸೆಪ್ಟೆಂಬರ್‌ನಲ್ಲಿ ಮ್ಯಾಕ್ರನ್ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

2016 ರಲ್ಲಿ, ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿದ್ದರು. ಯುಕೆ ಹೊರತುಪಡಿಸಿ, ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲು ಭಾರತದಿಂದ 5 ಬಾರಿ ಆಹ್ವಾನ ಪಡೆದ ಏಕೈಕ ದೇಶ ಫ್ರಾನ್ಸ್. ರಷ್ಯಾ ಮತ್ತು ಭೂತಾನ್‌ಗೆ ತಲಾ ನಾಲ್ಕು ಬಾರಿ ಆಹ್ವಾನ ನೀಡಲಾಗಿದೆ. 2009 ರಲ್ಲಿ, ಫ್ರೆಂಚ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರು ಗೌರವಾನ್ವಿತ ಅತಿಥಿಯಾಗಿ ಬಾಸ್ಟಿಲ್ ಡೇ ಪರೇಡ್​ನಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಿದ್ದರು.

ಫ್ರಾನ್ಸ್​ನಲ್ಲಿ ಕಾರ್ಮಿಕರ ಪ್ರತಿಭಟನೆ: ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಪಿಂಚಣಿ ಸುಧಾರಣೆ ಕ್ರಮಗಳನ್ನು ಖಂಡಿಸಿ ಸಾವಿರಾರು ಕಾರ್ಮಿಕರು ಕಾರ್ಮಿಕ ದಿನಾಚರಣೆಯಂದು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಸೋಮವಾರ ಫ್ರಾನ್ಸ್‌ನಾದ್ಯಂತ ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದರು. ಮಸೂದೆಯ ವಿರುದ್ಧ ಕಳೆದ ಹಲವಾರು ತಿಂಗಳುಗಳಿಂದ ಮುಷ್ಕರ ನಡೆಯುತ್ತಿದ್ದರೂ ಅದನ್ನು ಲೆಕ್ಕಿಸದೆ ನಿವೃತ್ತಿ ವಯಸ್ಸನ್ನು 62 ರಿಂದ 64 ಕ್ಕೆ ಏರಿಸುವ ಕಾನೂನಿಗೆ ಮ್ಯಾಕ್ರನ್ ಕಳೆದ ತಿಂಗಳು ಸಹಿ ಹಾಕಿದರು.

ಈ ಮಸೂದೆಯನ್ನು ವಿರೋಧಿಸಿ ಪ್ಯಾರಿಸ್‌ನಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಸ್ಪೋಟಕಗಳನ್ನು ಎಸೆದರು. ಭದ್ರತಾ ಪಡೆಗಳು ಅಶ್ರುವಾಯು ಮತ್ತು ನೀರಿನ ಫಿರಂಗಿಗಳನ್ನು ಬಳಸಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಮೊಲೊಟೊವ್ ಕಾಕ್ಟೈಲ್‌ ಬಾಟಲಿ ತಾಗಿದ ಕಾರಣದಿಂದ ಓರ್ವ ಪೊಲೀಸ್​ನ ಮುಖ ಮತ್ತು ಕೈಗೆ ಸುಟ್ಟ ಗಾಯಗಳಾಗಿವೆ ಎಂದು ಪ್ಯಾರಿಸ್ ಪೊಲೀಸರು ತಿಳಿಸಿದ್ದಾರೆ. ರಾಜಧಾನಿಯೊಂದರಲ್ಲೇ ಇದುವರೆಗೆ 46 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಶ್ಚಿಮ ನಗರವಾದ ನಾಂಟೆಸ್‌ನಲ್ಲಿ ಪ್ರತಿಭಟನಾಕಾರರು ಸ್ಪೋಟಕಗಳನ್ನು ಎಸೆದ ನಂತರ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು ಎಂದು ಮಾಧ್ಯಮ ವರದಿಗಾರರು ತಿಳಿಸಿದ್ದಾರೆ.

ಇದನ್ನೂ ಓದಿ : ಫೋನ್ ಬಿಟ್ಟಿರಲು ಆಗಲ್ವಾ? ಹಾಗಾದ್ರೆ ನಿಮಗೂ ನೋಮೋಫೋಬಿಯಾ ಇರಬಹುದು!

ABOUT THE AUTHOR

...view details