ನವದೆಹಲಿ: ಪ್ರಧಾನಿ ಮೋದಿ ಅವರು ಏಪ್ರಿಲ್ 24 ರಿಂದ ಎರಡು ದಿನ ದೇಶದ ವಿವಿಧ ಭಾಗಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಬರೋಬ್ಬರಿ 36 ಗಂಟೆ ಸಮಯದಲ್ಲಿ ಅಂದಾಜು 5000 ಕಿಲೋ ಮೀಟರ್ ದೂರ ಸಂಚಾರ ಮಾಡಲಿದ್ದಾರೆ. ಈ ಸುದೀರ್ಘ ಪ್ರವಾಸದಲ್ಲಿ ಏಳು ವಿವಿಧ ನಗರಗಳಿಗೆ ತೆರಳಿ, ಎಂಟು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ.
ಏಪ್ರಿಲ್ 24 ರಂದು ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಮೊದಲು ಮಧ್ಯ ಭಾರತದ ಮಧ್ಯಪ್ರದೇಶಕ್ಕೆ ಪ್ರಯಾಣಿಸುತ್ತಾರೆ. ನಂತರ ದಕ್ಷಿಣ ಭಾರತದ ಕೇರಳಕ್ಕೆ ತೆರಳಲಿದ್ದಾರೆ. ಅಲ್ಲಿಂದ ಪಶ್ಚಿಮದ ಕೇಂದ್ರಾಡಳಿತ ಪ್ರದೇಶಕ್ಕೆ ತಲುಪಿ, ನಂತರ ದೆಹಲಿಗೆ ಹಿಂತಿರುಗಲಿದ್ದಾರೆ ಎಂದು ಪ್ರಧಾನಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಕಚೇರಿಯಿಂದ ಪಿಎಂ ಪ್ರವಾಸದ ಮಾಹಿತಿ.. ಪ್ರಧಾನಿಯವರ ಸುದೀರ್ಘ ಪ್ರವಾಸದ ವಿವರ ನೀಡಿದ ಅಧಿಕಾರಿಗಳು, ಪ್ರಧಾನಿ ಮೋದಿ ಅವರು ಏಪ್ರಿಲ್ 24 ರಂದು ಬೆಳಗ್ಗೆ ದೆಹಲಿಯಿಂದ 500 ಕಿಲೋ ಮೀಟರ್ ದೂರದ ಖಜುರಾಹೊಗೆ ಪ್ರಯಾಣಿಸಲಿದ್ದಾರೆ. ಖಜುರಾಹೊದಿಂದ 280 ಕಿಲೋಮೀಟರ್ ದೂರದ ರೇವಾಗೆ ತೆರಳಿ ಅಲ್ಲಿ ನಡೆಯಲಿರುವ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಕಾಯಕ್ರಮ ಮುಗಿದ ನಂತರ ಮತ್ತೆ ಖಜುರಾಹೊಗೆ ಆಗಮಿಸಿ 1700 ಕಿಲೋ ಮೀಟರ್ ದೂರದ ಕೊಚ್ಚಿಗೆ ಪ್ರಯಾಣಿಸಲಿದ್ದಾರೆ. ಅಲ್ಲಿ ನಡೆಯುವ ಯುವ ಕಾನ್‌ಕ್ಲೇವ್‌ನಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ:ಬಿಜೆಪಿ ಮತ್ತು ಆರ್ಎಸ್ಎಸ್ನವರು ನನ್ನನ್ನು ರಾಜಕೀಯ ದ್ವೇಷದಿಂದ ಸೋಲಿಸಬೇಕೆಂದು ನಿಂತಿದ್ದಾರೆ: ಸಿದ್ದರಾಮಯ್ಯ