ನವದೆಹಲಿ :ನಾಳೆ ಇಟಲಿಯ ರಾಜಧಾನಿ ರೋಮ್ನಲ್ಲಿ ನಡೆಯಲಿರುವ ಜಿ-20 ಪ್ರಭಾವಿ ನಾಯಕರ ಶೃಂಗಸಭೆಯಲ್ಲಿ (G20 Extraordinary Leaders Summit) ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಶೃಂಗಸಭೆಗೆ ಹಾಜರಾಗಲು 20 ರಾಷ್ಟ್ರಗಳ ಗುಂಪಿನ ಇಟಲಿಯ ಅಧ್ಯಕ್ಷರಿಂದ ಆಹ್ವಾನವನ್ನು ನೀಡಲಾಗಿದೆ. ಈ ಹಿನ್ನೆಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಜಿ-20ಯ ಇಟಲಿಯ ಅಧ್ಯಕ್ಷರ ಆಹ್ವಾನದ ಮೇರೆಗೆ, ಪ್ರಧಾನಿ ನರೇಂದ್ರ ಮೋದಿಯವರು ಮುಂಬರುವ G-20 ಪ್ರಭಾವಿ ನಾಯಕರ ಶೃಂಗಸಭೆಯಲ್ಲಿ ಅಕ್ಟೋಬರ್ 12ರಂದು ವರ್ಚುವಲ್ ಆಗಿ ಭಾಗವಹಿಸಲಿದ್ದಾರೆ” ಎಂದು ಎಂಇಎ ಹೇಳಿದೆ.
ಸಚಿವಾಲಯದ ಪ್ರಕಾರ ತಾಲಿಬಾನ್ ಆಫ್ಘನ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ, ನಾಳಿನ ಸಭೆಯಲ್ಲಿ ಆಫ್ಘನ್ ಬಿಕ್ಕಟ್ಟಿನ ಮಾನವೀಯ ಅಂಶಗಳ ಬಗ್ಗೆ ಗಮನ ಕೇಂದ್ರೀಕರಿಸಲಿದ್ದಾರೆ.