ಕರ್ನಾಟಕ

karnataka

ETV Bharat / bharat

ಡಿಜಿಟಲ್ ಪಾವತಿ ತಂತ್ರಾಂಶ e-RUPIಗೆ ನಾಳೆ ಪ್ರಧಾನಿ ಮೋದಿ ಚಾಲನೆ - ಡಿಜಿಟಲ್ ಪೇಮೆಂಟ್

ಕ್ಯುಆರ್ ಕೋಡ್ ಅಥವಾ ಎಸ್​​​ಎಂಎಸ್ ಆಯಾಧಾರಿತ ಇ-ವೋಚರ್ ಫಲಾನುಭವಿಗಳ ಮೊಬೈಲ್​ಗೆ ಬರುತ್ತದೆ. ಬಳಕೆದಾರರ ಕಾರ್ಡ್, ಡಿಜಿಟಲ್ ಪಾವತಿ ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಇಲ್ಲದೆ ವೋಚರ್ ಅನ್ನು ರಿಡೀಮ್ ಮಾಡಲು ಸೇವೆ ಒದಗಿಸುವವರಲ್ಲಿ ಸಾಧ್ಯವಾಗುತ್ತದೆ..

pm-modi
ಪ್ರಧಾನಿ ಮೋದಿ

By

Published : Aug 1, 2021, 5:33 PM IST

ನವದೆಹಲಿ :ಡಿಜಿಟಲ್ ಪೇಮೆಂಟ್​​​​ಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿದಂದ e-RUPI (ಇ-ರುಪಿ) ಸೇವೆಯನ್ನ ನಾಳೆ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಡಿಜಿಟಲ್ ಪಾವತಿ ಉತ್ತೇಜನ ಹಾಗೂ ಕ್ಯಾಶ್​​​ಲೆಸ್​ ವ್ಯವಹಾರ ವೃದ್ಧಿಗಾಗಿ ಈ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ.

ಹಣಕಾಸು ಸೇವೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಇ-ರುಪಿಯನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶವು ಯುಪಿಐ ಐಡಿ ವ್ಯವಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದು ಯಾವುದೇ ಮಧ್ಯವರ್ತಿಯ ಸಹಕಾರವಿಲ್ಲದೆ ಸೇವಾ ಪೂರೈಕೆದಾರರಿಗೆ ಸಕಾಲಿಕ ಪಾವತಿ ನೀಡುತ್ತದೆ.

ಕ್ಯುಆರ್ ಕೋಡ್ ಅಥವಾ ಎಸ್​​​ಎಂಎಸ್ ಆಯಾಧಾರಿತ ಇ-ವೋಚರ್ ಫಲಾನುಭವಿಗಳ ಮೊಬೈಲ್​ಗೆ ಬರುತ್ತದೆ. ಬಳಕೆದಾರರ ಕಾರ್ಡ್, ಡಿಜಿಟಲ್ ಪಾವತಿ ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಇಲ್ಲದೆ ವೋಚರ್ ಅನ್ನು ರಿಡೀಮ್ ಮಾಡಲು ಸೇವೆ ಒದಗಿಸುವವರಲ್ಲಿ ಸಾಧ್ಯವಾಗುತ್ತದೆ.

ಈ ಸೇವೆಯನ್ನು ತಾಯಿ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳು, ಟಿಬಿ ನಿರ್ಮೂಲನೆ ಕಾರ್ಯಕ್ರಮಗಳು, ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ, ರಸಗೊಬ್ಬರ ಸಬ್ಸಿಡಿಗಳಂತಹ ಯೋಜನೆಗಳ ಅಡಿಯಲ್ಲಿ ಔಷಧಗಳು ಮತ್ತು ಪೌಷ್ಟಿಕಾಂಶದ ಬೆಂಬಲವನ್ನು ಒದಗಿಸುವ ಯೋಜನೆಗಳ ಅಡಿಯಲ್ಲಿ ಸೇವೆಗಳನ್ನು ತಲುಪಿಸಲು ಸಹ ಇದನ್ನು ಬಳಸಬಹುದು ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.

ಓದಿ:ಇಂದಿನಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಭಾರತ

ABOUT THE AUTHOR

...view details