ನವದೆಹಲಿ :ಟಾಯ್‌ಕಾಥಾನ್ 2021ರಲ್ಲಿ ಭಾಗವಹಿಸುವವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಜೂನ್ 24ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಲಿದ್ದಾರೆ. ಟಾಯ್‌ಕಾಥಾನ್ 2021 ಅನ್ನು ಶಿಕ್ಷಣ ಸಚಿವಾಲಯ, ಡಬ್ಲ್ಯುಸಿಡಿ ಸಚಿವಾಲಯ, ಎಂಎಸ್‌ಎಂಇ ಸಚಿವಾಲಯ, ಡಿಪಿಐಐಟಿ, ಜವಳಿ ಸಚಿವಾಲಯ, ಐ ಮತ್ತು ಬಿ ಸಚಿವಾಲಯ ಮತ್ತು ಎಐಸಿಟಿಇ ಜಂಟಿಯಾಗಿ ಜನವರಿ 5ರಂದು ಕ್ರೌಡ್-ಸೋರ್ಸ್ ಹೊಸ ಆಟಿಕೆಗಳು ಮತ್ತು ಆಟಗಳ ವಿಚಾರಗಳಿಗಾಗಿ ಪ್ರಾರಂಭಿಸಿದೆ.
ಟಾಯ್‌ಕಾಥಾನ್ 2021ಗಾಗಿ ಭಾರತದಾದ್ಯಂತ ಸುಮಾರು 1.2 ಲಕ್ಷ ಭಾಗವಹಿಸುವವರು ನೋಂದಾಯಿಸಿ 17,000ಕ್ಕೂ ಹೆಚ್ಚು ವಿಚಾರಗಳನ್ನು ಸಲ್ಲಿಸಿದ್ದಾರೆ. ಅದರಲ್ಲಿ 1,567 ವಿಚಾರಗಳನ್ನು ಮೂರು ದಿನಗಳ ಆನ್‌ಲೈನ್ ಟಾಯ್‌ಕಾಥಾನ್ ಗ್ರ್ಯಾಂಡ್ ಫಿನಾಲೆಗಾಗಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಈ ಕಾನ್ಫರೆನ್ಸ್ ಜೂನ್ 22ರಿಂದ 24ರವರೆಗೆ ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.