ಕರ್ನಾಟಕ

karnataka

ETV Bharat / bharat

ನಾಳೆ ದೇಶದ 6 ವಿವಿಧ ರಾಜ್ಯದ ರೈತರೊಂದಿಗೆ ಪ್ರಧಾನಿ ಮೋದಿ ಸಂವಾದ

ನಾಳೆ ಪ್ರಧಾನಿ ದೇಶದ ಆರು ವಿವಿಧ ರಾಜ್ಯಗಳ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಸಂದರ್ಭ ಹಲವಾರು ಕೇಂದ್ರ ಸಚಿವರು ದೇಶದ ಬೇರೆ ಬೇರೆ ಭಾಗಗಳಲ್ಲಿದ್ದು, ಸಂವಾದದಲ್ಲಿ ಭಾಗವಹಿಸಲಿದ್ದಾರೆ.

modi
ಪ್ರಧಾನಿ ಮೋದಿ

By

Published : Dec 24, 2020, 9:39 PM IST

ನವದೆಹಲಿ:ಕೃಷಿ ಕ್ಷೇತ್ರಕ್ಕಾಗಿ ಸರಕಾರದ ಪ್ರಯತ್ನಗಳ ಬಗ್ಗೆ ಗಮನಹರಿಸುವಲ್ಲಿ ನಾಳೆ ರೈತರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಇನ್ನು ಈ ಸಂವಾದದಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರು ಮತ್ತು ಬಿಜೆಪಿ ಪದಾಧಿಕಾರಿಗಳು ಹಾಜರಾಗಲಿದ್ದಾರೆ.

ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ, ಕಂತಿನಂತೆ 18,000 ಕೋಟಿ ರೂ.ಗಳನ್ನು ಪ್ರಧಾನಿ ನಾಳೆ(ಡಿಸೆಂಬರ್ 25) 9 ಕೋಟಿ ರೈತರಿಗೆ ಬಿಡುಗಡೆ ಮಾಡಲಿದ್ದಾರೆ. ಒಂದು ಗುಂಡಿಯನ್ನು ಒತ್ತುವ ಮೂಲಕ ಮೊತ್ತವನ್ನು ವರ್ಗಾವಣೆ ಮಾಡಲು ಪ್ರಧಾನಿ ಚಾಲನೆ ನೀಡಲಿದ್ದಾರೆ.

ಇದೇ ಈ ಸಂದರ್ಭದಲ್ಲಿ ಪ್ರಧಾನಿ ದೇಶದ ಆರು ವಿವಿಧ ರಾಜ್ಯಗಳ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.

ಇದನ್ನೂ ಓದಿ:ತನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದ ಮಮತಾ: ಆರೋಪ ನಿರಾಕರಿಸಿದ ವಿಶ್ವ ಭಾರತಿ

ಇನ್ನು ಈ ಸಂದರ್ಭ ಹಲವಾರು ಕೇಂದ್ರ ಸಚಿವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಥವಾ ದೇಶದ ಇತರ ಭಾಗಗಳಲ್ಲಿರುತ್ತಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿಯಿಂದ ಪ್ರಧಾನಿ ಮೋದಿ ಭಾಷಣವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೇಳಲಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಅಸ್ಸೋಂನ ಸಿಲ್ಚಾರ್‌ನಲ್ಲಿ ರೈತರೊಂದಿಗೆ ಸಂವಾದವನ್ನು ಆಲಿಸಲಿದ್ದು, ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಉತ್ತರ ಪ್ರದೇಶದ ಹಾಪುರದಲ್ಲಿ ಇರಲಿದ್ದಾರೆ. ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ತಮ್ಮ ಕ್ಷೇತ್ರ ಅಮೆಥಿಯಲ್ಲಿದ್ದರೆ, ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಉಕ್ಕಿನ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಒಡಿಶಾದ ಜಗತ್ಸಿಂಗ್‌ಪುರದಲ್ಲಿರುತ್ತಾರೆ.

ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಜೈಸಲ್ಮೇರ್‌ನಲ್ಲಿರುವ ನಿರೀಕ್ಷೆಯಿದೆ. ಅಂತೆಯೇ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಪಾಟ್ನಾದಿಂದ ಕಾರ್ಯಕ್ರಮ ಕೇಳಲಿದ್ದಾರೆ. ಕೇಂದ್ರ ಸಚಿವ ಜನರಲ್ (ನಿವೃತ್ತ) ವಿ ಕೆ ಸಿಂಗ್ ಅವರ ಸಂಸದೀಯ ಕ್ಷೇತ್ರವಾದ ಗಾಜಿಯಾಬಾದ್‌ನಲ್ಲಿ ಇರಲಿದ್ದಾರೆ.

ABOUT THE AUTHOR

...view details