ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ 11 ಗಂಟೆಗೆ 'ಆತ್ಮನಿರ್ಭರ ಭಾರತ ಸ್ವಯಂಪೂರ್ಣ ಗೋವಾ' ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಯೋಜನೆಯ ಫಲಾನುಭವಿಗಳು ಮತ್ತು ಮಧ್ಯಸ್ಥಗಾರರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.
ಇಂದು 'ಆತ್ಮನಿರ್ಭರ ಭಾರತ ಸ್ವಯಂಪೂರ್ಣ ಗೋವಾ' ಫಲಾನುಭವಿಗಳ ಜತೆ ಪ್ರಧಾನಿ ಮೋದಿ ಸಂವಾದ - ಗೋವಾ
ಅಕ್ಟೋಬರ್ 1 ರಂದು ಗೋವಾದಲ್ಲಿ ಆರಂಭಿಸಿರುವ 'ಆತ್ಮನಿರ್ಭರ ಭಾರತ ಸ್ವಯಂಪೂರ್ಣ ಗೋವಾ' ಕಾರ್ಯಕ್ರಮದ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ಇಂದು ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ಬಳಿಕ ಪ್ರಧಾನಿ ಭಾಷಣ ಮಾಡಲಿದ್ದಾರೆ.
'ಆತ್ಮನಿರ್ಭರ ಭಾರತ ಸ್ವಯಂಪೂರ್ಣ ಗೋವಾ' ಫಲಾನುಭವಿಗಳ ಜತೆ ಇಂದು ಪ್ರಧಾನಿ ಮೋದಿ ಸಂವಾದ
ಈ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರಿ ಅಧಿಕಾರಿಯನ್ನು 'ಸ್ವಯಂಪೂರ್ಣ ಮಿತ್ರ' ಎಂದು ನೇಮಿಸಲಾಗುತ್ತದೆ. ಮಿತ್ರರು ಗೊತ್ತುಪಡಿಸಿದ ಪಂಚಾಯತ್ ಅಥವಾ ಪುರಸಭೆಗೆ ಭೇಟಿ ನೀಡುತ್ತಾರೆ. ಜನರೊಂದಿಗೆ ಸಂವಹನ, ಅನೇಕ ಸರ್ಕಾರಿ ಇಲಾಖೆಗಳನ್ನು ಸಂಯೋಜಿಸಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಪ್ರಯೋಜನಗಳು ಲಭ್ಯವಿರುವುದನ್ನು ಖಾತ್ರಿಪಡಿಸಿಕೊಳ್ಳುತ್ತಾರೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಉಪಸ್ಥಿತಿಯಲ್ಲಿ ಸ್ವಯಂಪೂರ್ಣ ಗೋವಾದ ಉಪಕ್ರಮವನ್ನು 2020ರ ಅಕ್ಟೋಬರ್ 1 ರಂದು ಪ್ರಾರಂಭಿಸಲಾಗಿತ್ತು.