ನವದೆಹಲಿ:ಟೋಕಿಯೊ ಒಲಿಂಪಿಕ್ಸ್‌ಗೆ ತೆರಳುವ ಭಾರತೀಯ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಜುಲೈ 13 ರಂದು ಸಂಜೆ 5 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಲಿದ್ದಾರೆ. ಪ್ರಧಾನ ಮಂತ್ರಿಯವರ ಸಂವಹನವು ಕ್ರೀಡಾಪಟುಗಳನ್ನು ಆಟಗಳಲ್ಲಿ ಭಾಗವಹಿಸುವ ಮುನ್ನ ಪ್ರೇರೇಪಿಸುವ ಪ್ರಯತ್ನವಾಗಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಇತ್ತೀಚೆಗೆ, ಪ್ರಧಾನಿ ಮೋದಿ ಅವರು ಮನ್ ಕಿ ಬಾತ್ನಲ್ಲಿ ಕುರಿತು ಕೆಲವು ಕ್ರೀಡಾಪಟುಗಳ ಸ್ಪೂರ್ತಿದಾಯಕ ಪ್ರಯಾಣದ ಬಗ್ಗೆ ಚರ್ಚಿಸಿದ್ದರು. ಜೊತೆಗೆ ರಾಷ್ಟ್ರವು ಮುಂದೆ ಬರಲು ಮತ್ತು ಅವರನ್ನು ಪೂರ್ಣ ಹೃದಯದಿಂದ ಬೆಂಬಲಿಸುವಂತೆ ಒತ್ತಾಯಿಸಿದರು.
ಈ ಕಾರ್ಯಕ್ರಮದಲ್ಲಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭಾಗವಹಿಸಲಿದ್ದಾರೆ. ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್ ಮತ್ತು ಕಾನೂನು ಸಚಿವ ಕಿರೆನ್ ರಿಜಿಜು ಇರಲಿದ್ದಾರೆ.