ಕರ್ನಾಟಕ

karnataka

ETV Bharat / bharat

ಇಂದು ವಾರಣಾಸಿಗೆ ಪ್ರಧಾನಿ ಭೇಟಿ: ನವೀಕೃತ ರಾಷ್ಟ್ರೀಯ ಹೆದ್ದಾರಿ ಸಮರ್ಪಣೆ - ಪ್ರಧಾನಿ ನರೇಂದ್ರ ಮೋದಿ ಇಂದು ವಾರಣಾಸಿಗೆ ಭೇಟಿ

ಪ್ರಧಾನಿ ನರೇಂದ್ರ ಮೋದಿ ಇಂದು ವಾರಣಾಸಿಗೆ ಭೇಟಿ ನೀಡಲಿದ್ದಾರೆ. ನವೀಕೃತಗೊಂಡಿರುವ ರಾಷ್ಟ್ರೀಯ ಹೆದ್ದಾರಿ 19 ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ವಾರಣಾಸಿಯಲ್ಲಿ ಭಿಗಿ ಭದ್ರತೆ ಕೈಗೊಳ್ಳಲಾಗಿದೆ.

PM Modi
ಪ್ರಧಾನಿ ನರೇಂದ್ರ ಮೋದಿ

By

Published : Nov 30, 2020, 6:37 AM IST

ಲಖನೌ( ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿದ್ದಾರೆ. ನವೀಕೃತಗೊಂಡಿರುವ ರಾಷ್ಟ್ರೀಯ ಹೆದ್ದಾರಿ 19 ಅನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ.

ಇನ್ನು ಕಾಶಿ ವಿಶ್ವನಾಥನ ದರ್ಶನ ಪಡೆಯಲಿರುವ ಪ್ರಧಾನಿ ನರೇಂದ್ರ ಮೋದಿ, ದೇವಸ್ಥಾನದ ಕಾರಿಡಾರ್​ ಪ್ರಾಜೆಕ್ಟ್​, ಸಾರಾನಾಥ್​ ಆರ್ಕ್ಯಾಲಾಜಿಕಲ್​​ ಸೈಟ್​, ಆ ಬಳಿಕ ಪ್ರಧಾನಿ ದೇವ ದೀಪಾವಳಿ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳಳಿದ್ದಾರೆ.

ಓದಿ:ಇಂದು ಭಾರತದ ನೇತೃತ್ವದಲ್ಲಿ ಶಾಂಘೈ ಸಹಕಾರ ಸಂಘಟನೆ ರಾಷ್ಟ್ರಗಳ ಸಭೆ

ರಾಷ್ಟ್ರೀಯ ಹೆದ್ದಾರಿ 19 ರ 73 ಕಿ.ಮೀ ದೂರವನ್ನ ಆರು ಲೇನ್​​ಗಳಾಗಿ ಪರಿವರ್ತನೆ ಮಾಡಲಾಗಿದೆ. ಸುಮಾರು 2,447 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಈ ರಸ್ತೆ ನವೀಕರಣದಿಂದ ಅಲಹಾಬಾದ್​​ ಟು ವಾರಣಾಸಿಯ ದೂರವನ್ನು 1 ಗಂಟೆ ಕಡಿಮೆ ಗೊಳಿಸಿದಂತಾಗಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ವಾರಣಾಸಿಯಲ್ಲಿ ಭಿಗಿ ಭದ್ರತೆ ಕೈಗೊಳ್ಳಲಾಗಿದೆ.

ABOUT THE AUTHOR

...view details