ಕರ್ನಾಟಕ

karnataka

ETV Bharat / bharat

ಸಾಗರೋತ್ತರ ಭಾರತ ಶೃಂಗಸಭೆಯ ಎರಡನೇ ಆವೃತ್ತಿ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಕಡಲ ಭಾರತ ಶೃಂಗಸಭೆ 2021 ಅನ್ನು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು www.maritimeindiasummit.in ಎಂಬ ವರ್ಚುಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಮಾರ್ಚ್ 2 ರಿಂದ ಮಾರ್ಚ್ 4 ರವರೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆಯೋಜಿಸಿದೆ.

PM Modi to inaugurate second edition of Maritime India Summit today
ಪ್ರಧಾನಿ ಮೋದಿ

By

Published : Mar 2, 2021, 9:56 AM IST

Updated : Mar 2, 2021, 10:24 AM IST

ನವದೆಹಲಿ:ಮ್ಯಾರಿಟೈಮ್ ಇಂಡಿಯಾ ಶೃಂಗಸಭೆಯ (ಎಂಐಎಸ್) 2ನೇ ಆವೃತ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಲಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ, ಮ್ಯಾರಿಟೈಮ್ ಇಂಡಿಯಾ ಶೃಂಗಸಭೆಯ ಉದ್ಘಾಟನಾ ಸಮಾರಂಭ ಜರುಗಲಿದೆ. ಈ ಶೃಂಗಸಭೆಯು ಕಡಲ ವಲಯದ ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸುತ್ತದೆ ಮತ್ತು ಭಾರತದ ಕಡಲ ಆರ್ಥಿಕತೆಯ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ನಿನ್ನೆ ಟ್ವೀಟ್ ಮಾಡಿದ್ದಾರೆ.

ಭಾರತದ ಕಡಲ ಭಾಗದ ಆರ್ಥಿಕತೆಯ ಬೆಳವಣಿಗೆಯನ್ನು ಹೆಚ್ಚಿಸಲು ಶೃಂಗಸಭೆ ಸಹಾಯ ಮಾಡುತ್ತದೆ. ಹಲವಾರು ದೇಶಗಳ ಸಿಇಒಗಳು ಮತ್ತು ರಾಯಭಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಕಾರಣ ಭಾರತದಲ್ಲಿ ಕಡಲ ವಲಯದಲ್ಲಿ ಹೂಡಿಕೆ ಹೆಚ್ಚಿಸಲು ಸಹಕಾರಿಯಾಗುತ್ತದೆ. ಮಾರ್ಚ್ 2 ರಿಂದ ಮಾರ್ಚ್ 4ರವರೆಗೆ ನಿಗದಿಯಾಗಿದ್ದ ಎಂಐಎಸ್ ಶೃಂಗಸಭೆ-2021 ರಲ್ಲಿ 50 ದೇಶಗಳ ಒಂದು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ಸಾಧ್ಯತೆಯಿದ್ದು, ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ:ಬರದಿಂದ ತತ್ತರಿಸುತ್ತಿದೆ ಯೆಮೆನ್​: ದೇಣಿಗೆ ನೀಡುವಂತೆ ಯುಎನ್​ ಮನವಿ

ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಪ್ರಕಾರ, ಕಡಲ ಭಾರತ ಶೃಂಗಸಭೆ 2021 ಅನ್ನು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು www.maritimeindiasummit.in ಎಂಬ ವರ್ಚುಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಮಾರ್ಚ್ 2 ರಿಂದ ಮಾರ್ಚ್ 4 ರವರೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆಯೋಜಿಸಿದೆ.

ಹಲವಾರು ದೇಶಗಳ ಪ್ರಖ್ಯಾತ ಭಾಷಣಕಾರರು ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಮತ್ತು ಭಾರತೀಯ ಕಡಲ ಡೊಮೇನ್‌ನಲ್ಲಿನ ವ್ಯಾಪಾರ ಅವಕಾಶಗಳು ಮತ್ತು ಹೂಡಿಕೆಗಳನ್ನು ಅನ್ವೇಷಿಸಬಹುದು. ಮೂರು ದಿನಗಳ ಶೃಂಗಸಭೆಯಲ್ಲಿ ಡೆನ್ಮಾರ್ಕ್ ಪಾಲುದಾರ ರಾಷ್ಟ್ರವಾಗಿದೆ.

Last Updated : Mar 2, 2021, 10:24 AM IST

ABOUT THE AUTHOR

...view details