ಕರ್ನಾಟಕ

karnataka

ETV Bharat / bharat

ಕಾಶಿ ಮೀರಿಸುವ ಮಹಾಕಾಲ ಕಾರಿಡಾರ್​.. ಪ್ರಧಾನಿ ಮೋದಿಯಿಂದ ಇಂದು ಲೋಕಾರ್ಪಣೆ - pm modi ujjain temple visit

ಮಧ್ಯಪ್ರದೇಶದ ಉಜ್ಜಯಿನಿಯ ಪ್ರಖ್ಯಾತ ಮಹಾಕಾಲ ಕಾರಿಡಾರ್​ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆ ಮಾಡಲಿದ್ದಾರೆ.

newly-built-mahakaal-corridor
ಕಾಶಿ ಮೀರಿಸುವ ಮಹಾಕಾಲ ಕಾರಿಡಾರ್

By

Published : Oct 11, 2022, 9:13 AM IST

Updated : Oct 11, 2022, 10:18 AM IST

ಉಜ್ಜಯಿನಿ (ಮಧ್ಯಪ್ರದೇಶ):ಕಾಶಿ ವಿಶ್ವನಾಥನ ಕಾರಿಡಾರ್​ ನಿರ್ಮಾಣದ ಮಾದರಿ ರೂಪಿಸಲಾದ ದೇಶದ 12 ಜ್ಯೋತಿರ್ಲಿಂಗಗಳ ಪೈಕಿ ಉಜ್ಜಯಿನಿಯ ಮಹಾಕಾಲ ದೇವಾಲಯ ಕಾರಿಡಾರ್​ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟನೆ ಮಾಡಲಿದ್ದಾರೆ.

ಮಧ್ಯಪ್ರದೇಶದಲ್ಲಿರುವ ಈ ಶಿವನ ದೇವಾಲಯವು ದಕ್ಷಿಣಾಭಿಮುಖವಾಗಿದ್ದುದೆ. ಉಜ್ಜಯಿನಿಯ ಮಹಾಕಾಲ ಶಿವನ ದರ್ಶನ ಪಡೆಯಲು ದೇಶ ವಿದೇಶಗಳಿಂದ ಭಕ್ತರು ಭೇಟಿ ನೀಡುತ್ತಾರೆ. ಪ್ರಖ್ಯಾತ ಕ್ಷೇತ್ರದಲ್ಲಿ ಹೊಸದಾಗಿ ನಿರ್ಮಿಸಲಾದ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

ಮಹಾಕಾಲ ಕಾರಿಡಾರ್​.. ಪ್ರಧಾನಿ ಮೋದಿಯಿಂದ ಇಂದು ಲೋಕಾರ್ಪಣೆ

ಉದ್ಘಾಟನೆಯ ಬಳಿಕ ಅಕ್ಟೋಬರ್ 12 ರಿಂದ ಕಾರಿಡಾರ್​ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ. ಮಹಾಕಾಲ ಕಾರಿಡಾರ್​ ಶಿವನ ಎಲ್ಲ ಸ್ವರೂಪಗಳ ಮಾಹಿತಿ ನೀಡಲಿದೆ. ದೇಶ ಮತ್ತು ವಿದೇಶಗಳಿಂದ ಭೇಟಿ ನೀಡುವ ಭಕ್ತರು ಶಿವನ ವಿವಿಧ ಅವತಾರಗಳನ್ನು ಮತ್ತು ಸನಾತನ ಧರ್ಮ ಮತ್ತು ಪುರಾಣಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ.

ಮಹಾಕಾಲ ಕಾರಿಡಾರ್​ ಪ್ರಧಾನಿ ಮೋದಿಯಿಂದ ಇಂದು ಲೋಕಾರ್ಪಣೆ

ಮಹಾಕಾಲ ಕಾರಿಡಾರ್, ಕಾಶಿ ವಿಶ್ವನಾಥ ಕಾರಿಡಾರ್‌ಗಿಂತ ನಾಲ್ಕು ಪಟ್ಟು ದೊಡ್ಡದಾಗಿದೆ. ಭಗವಂತನ ವಿವಿಧ ಅವತಾರಗಳು ಮತ್ತು ಆತನಿಗೆ ಸಂಬಂಧಿಸಿದ ಪುರಾಣಗಳನ್ನು ಈ ಸಂಕೀರ್ಣದಲ್ಲಿ ಭಕ್ತರು ಕಾಣಬಹುದಾಗಿದೆ. ಕಾರಿಡಾರ್​ ಪೂರ್ಣ ವೀಕ್ಷಣೆಗೆ ಹಲವು ಗಂಟೆಗಳು ಬೇಕಾಗುತ್ತವೆ. ಉಜ್ಜಯಿನಿಯ ಹೊಸ ಕಾರಿಡಾರ್ ಮಹಾಕಾಳೇಶ್ವರ ವಾಟಿಕಾ, ಮಹಾಕಾಳೇಶ್ವರ ಮಾರ್ಗ, ಶಿವ ಅವತಾರ ವಾಟಿಕಾ, ಪ್ರವಚನ ಸಭಾಂಗಣ, ಗಣೇಶ ವಿದ್ಯಾಲಯ ಸಂಕೀರ್ಣ, ರುದ್ರಸಾಗರ ನದಿಯ ಮುಂಭಾಗದ ಅಭಿವೃದ್ಧಿ, ಧರ್ಮಶಾಲಾಗಳು ಮತ್ತು ಪಾರ್ಕಿಂಗ್ ಸೌಲಭ್ಯಗಳನ್ನು ಹೊಂದಿದೆ.

ಓದಿ:'ಕಾಶಿ ವಿಶ್ವನಾಥ ಧಾಮ' ದೇಶದ ಸಂಸ್ಕೃತಿ, ಪ್ರಾಚೀನ ಇತಿಹಾಸಕ್ಕೆ ಸಾಕ್ಷಿ - ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಮಾತು

Last Updated : Oct 11, 2022, 10:18 AM IST

ABOUT THE AUTHOR

...view details