ನವದೆಹಲಿ:ಭಾರತದ ಅತಿದೊಡ್ಡ ಡ್ರೋನ್ ಉತ್ಸವ ಭಾರತ್ ಡ್ರೋನ್ ಮಹೋತ್ಸವ 2022 ಅನ್ನು ನರೇಂದ್ರ ಮೋದಿ ದೆಹಲಿಯ ಪ್ರಗತಿ ಮೈದಾನದಲ್ಲಿ ಉದ್ಘಾಟಿಸಿದರು. ಕಿಸಾನ್ ಡ್ರೋನ್ ಪೈಲಟ್‌ಗಳೊಂದಿಗೆ ಸಂವಾದ ನಡೆಸಲಿದ್ದು, ಓಪನ್ ಏರ್ ಡ್ರೋನ್ ಪ್ರದರ್ಶನಗಳನ್ನು ವೀಕ್ಷಿಸಲಿದ್ದಾರೆ.
ಭಾರತದ ಅತಿದೊಡ್ಡ 'ಡ್ರೋನ್ ಉತ್ಸವ'ಕ್ಕೆ ಪ್ರಧಾನಿ ಮೋದಿ ಚಾಲನೆ - ಪ್ರಗತಿ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ
ಇಂದು ಮತ್ತು ನಾಳೆ ಎರಡು ದಿನಗಳ ಕಾಲ ನಡೆಯುವ 'ಭಾರತ್ ಡ್ರೋನ್ ಮಹೋತ್ಸವ 2022' ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಡ್ರೋನ್ ಸ್ಟಾರ್ಟ್‌ಅಪ್‌ಗಳನ್ನು ಒಳಗೊಂಡ 1600ಕ್ಕೂ ಹೆಚ್ಚು ಪ್ರತಿನಿಧಿಗಳು ಮಹೋತ್ಸವದಲ್ಲಿ ಭಾಗವಹಿಸಿದ್ದಾರೆ.
PM Modi to inaugurate India's biggest Drone Festival
ಈ ಬಗ್ಗೆ ಟ್ವೀಟ್ ಮಾಡಿರುವ ನರೇಂದ್ರ ಮೋದಿ, ಈ ವೇದಿಕೆಯು ಡ್ರೋಣ್ ವಲಯದಲ್ಲಿ ಭಾರತದ ಉಪಸ್ಥಿತಿಯನ್ನು ಹೆಚ್ಚಿಸುವ ಉದ್ದೇಶ ಹೊಂದಿದ್ದು, ಸ್ಟಾರ್ಟ್‌ಅಪ್‌ಗಳು ಸೇರಿದಂತೆ ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸುತ್ತದೆ ಎಂದು ತಿಳಿಸಿದ್ದಾರೆ.
ಡ್ರೋನ್ ಸ್ಟಾರ್ಟ್‌ಅಪ್‌ಗಳ 1600ಕ್ಕೂ ಹೆಚ್ಚು ಪ್ರತಿನಿಧಿಗಳು ಮಹೋತ್ಸವದಲ್ಲಿ ಭಾಗಿಯಾಗಿದ್ದು, 70ಕ್ಕೂ ಹೆಚ್ಚು ಪ್ರದರ್ಶಕರು ಡ್ರೋನ್‌ಗಳ ವಿವಿಧ ಬಳಕೆಯನ್ನು ಪ್ರದರ್ಶಿಸಿದ್ದಾರೆ.
Last Updated : May 27, 2022, 11:23 AM IST