ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಜನವರಿ 13ರಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ವಿಹಾರ ನೌಕೆಯಾದ 'ಎಂವಿ ಗಂಗಾ ವಿಲಾಸ್'ಗೆ ಚಾಲನೆ ನೀಡಲಿದ್ದಾರೆ. ಪಂಚತಾರಾ ಹೋಟೆಲ್‌ನಂತಹ ಸೌಲಭ್ಯಗಳನ್ನು ಹೊಂದಿರುವ ಈ ವಿಹಾರ ನೌಕೆಯಿಂದ ಭಾರತದ 'ರಿವರ್ ಕ್ರೂಸ್' ಪ್ರವಾಸೋದ್ಯಮದ ಹೊಸ ದೆಸೆ ಆರಂಭವಾಗಲಿದೆ. ಈ ವಿಹಾರ ನೌಕೆಯು 51 ದಿನಗಳ ಕಾಲ 3,200 ಕಿಲೋಮೀಟರ್‌ಗಳನ್ನು ಕ್ರಮಿಸಲಿದೆ ಎಂದೇ ಹೇಳಲಾಗುತ್ತಿದೆ.
ಐಷಾರಾಮಿಯಾದ ಎಂವಿ ಗಂಗಾ ವಿಲಾಸ್ ನೌಕೆಯು ಭಾರತವನ್ನು ವಿಶ್ವದ ನದಿ ವಿಹಾರ ನಕ್ಷೆಯಲ್ಲಿ ಉನ್ನತ ಎತ್ತರಕ್ಕೆ ಕೊಂಡೊಯ್ಯಲಿದೆ. ಭಾರತ ಮತ್ತು ಬಾಂಗ್ಲಾದೇಶದ ನದಿಗಳ ಮೂಲಕ ಹಾದುಹೋಗುವ ಈ ರಿವರ್ ಕ್ರೂಸ್ 27 ವಿವಿಧ ನದಿಗಳಲ್ಲಿ ಪ್ರಯಾಣಿಸಲಿದೆ. ಈ ಜಲ ಮಾರ್ಗದುದ್ದಕ್ಕೂ ವಿಶ್ವ ಪರಂಪರೆಯ ತಾಣಗಳು ಸೇರಿದಂತೆ 50ಕ್ಕೂ ಹೆಚ್ಚು ಪ್ರವಾಸಿ ತಾಣಗಳಲ್ಲಿ ನಿಲ್ಲುಗಡೆಯಾಗಲಿದೆ.
ಐಷಾರಾಮಿ ಸೌಲಭ್ಯಗಳ ನೌಕೆ: ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ರಿವರ್ ಕ್ರೂಸ್ಅನ್ನು ಖಾಸಗಿ ಕಂಪನಿಗಳಾದ ಅಂಟಾರಾ ಐಷಾರಾಮಿ ರಿವರ್ ಕ್ರೂಸಸ್ ಮತ್ತು ಜೆಎಂ ಬ್ಯಾಕ್ಸಿ ರಿವರ್ ಕ್ರೂಸಸ್ ಜೊತೆಗೆ ಭಾರತದ ಒಳನಾಡಿನ ಜಲಮಾರ್ಗ ಪ್ರಾಧಿಕಾರ (ಐಡಬ್ಲ್ಯುಎಐ) ಸಹಭಾಗಿತ್ವದಲ್ಲಿ ನಿರ್ವಹಿಸಲಾಗುತ್ತದೆ. ಗಂಗಾ ವಿಲಾಸ್ ನೌಕೆಯು 18 ಕ್ಯಾಬಿನ್‌ಗಳು ಸೇರಿದಂತೆ ಎಲ್ಲ ಇತರ ಸೌಕರ್ಯಗಳನ್ನು ಹೊಂದಿದೆ. ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಇದನ್ನು ಅನನ್ಯವಾಗಿ ವಿನ್ಯಾಸಗೊಳಿಸಲಾಗಿದೆ.
ಜೊತೆಗೆ ಗಂಗಾ ವಿಲಾಸ್ ನೌಕೆಯು ಸಾಂಸ್ಕೃತಿಕ ಸ್ಪರ್ಶವನ್ನು ಹೊಂದಿದೆ. ಇದರೊಂದಿಗೆ ಸ್ನಾನಗೃಹ, ಕನ್ವರ್ಟಿಬಲ್ ಬೆಡ್, ಫ್ರೆಂಚ್ ಬಾಲ್ಕನಿ, ಎಲ್ಇಡಿ ಟಿವಿ, ಸ್ಮೋಕ್ ಡಿಟೆಕ್ಟರ್, ಲೈಫ್ ವೆಸ್ಟ್ ಮತ್ತು ಸ್ಪ್ರಿಂಕ್ಲರ್ನಂತಹ ಆಧುನಿಕ ಸವಲತ್ತುಗಳನ್ನು ಹೊಂದಿದೆ. ಅತಿಥಿಗಳಿಗೆ ಮದು ಅನುಭವ ನೀಡುವ ಈ ನೌಕೆಯು ರೆಸ್ಟೋರೆಂಟ್, ಸ್ಪಾ ಮತ್ತು ಸಂಡೆಕ್ ಸಹ ಹೊಂದಿದೆ. ಇದರ ರೆಸ್ಟೊರೆಂಟ್‌ನಲ್ಲಿ ಕಾಂಟಿನೆಂಟಲ್ ಮತ್ತು ಭಾರತೀಯ ಪಾಕಪದ್ಧತಿಯನ್ನು ಒದಗಿಸುವ ಬಫೆ ಕೌಂಟರ್‌ಗಳು ಸಹ ಇವೆ.