ಕರ್ನಾಟಕ

karnataka

ETV Bharat / bharat

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ನೀತಿ ಆಯೋಗದ ಸಭೆ

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯೊಂದಿಗೆ ಆರೋಗ್ಯ, ಕೌಶಲ್ಯ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಇಂದು ನಡೆಯಲಿರುವ ನೀತಿ ಆಯೋಗದ ಆಡಳಿತ ಮಂಡಳಿಯ 8ನೇ ಸಭೆಯಲ್ಲಿ ಪ್ರಧಾನಿ ಮೋದಿ ಚರ್ಚಿಸಲಿದ್ದಾರೆ.

PM Modi
ಪ್ರಧಾನಿ ಮೋದಿ

By

Published : May 27, 2023, 11:07 AM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೀತಿ ಆಯೋಗದ ಎಂಟನೇ ಆಡಳಿತ ಮಂಡಳಿ ಸಭೆ ಇಂದು ನಡೆಯಲಿದೆ. 'ವಿಕ್ಷಿತ್ ಭಾರತ್ @2047: ಟೀಮ್ ಇಂಡಿಯಾ ಪಾತ್ರ' ಥೀಮ್​ನಡಿ ನವದೆಹಲಿಯ ಪ್ರಗತಿ ಮೈದಾನದಲ್ಲಿರುವ ಹೊಸ ಸಮಾಂಗಣದಲ್ಲಿ ಇಂದು ಸಭೆ ಆಯೋಜಿಸಲಾಗಿದೆ.

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯೊಂದಿಗೆ ಆರೋಗ್ಯ, ಕೌಶಲ್ಯ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಪ್ರಧಾನಿ ಮೋದಿ ಚರ್ಚಿಸಲಿದ್ದಾರೆ. 8 ಪ್ರಮುಖ ವಿಷಯಗಳನ್ನು ದಿನದ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ನೀತಿ ಆಯೋಗ ಹೇಳಿದೆ. ವಿಕ್ಷಿತ್ ಭಾರತ್ @2047, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ಒತ್ತು, ಮೂಲಸೌಕರ್ಯ ಮತ್ತು ಹೂಡಿಕೆ, ಮಹಿಳಾ ಸಬಲೀಕರಣ, ಆರೋಗ್ಯ ಮತ್ತು ಪೋಷಣೆ, ಕೌಶಲ್ಯ ಅಭಿವೃದ್ಧಿ, ಪ್ರದೇಶಕ್ಕೆ ಗತಿ ಶಕ್ತಿ ಅಭಿವೃದ್ಧಿ ಮತ್ತು ಸಾಮಾಜಿಕ ಮೂಲಸೌಕರ್ಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

"ಸಭೆಯಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು/ಲೆಫ್ಟಿನೆಂಟ್ ಗವರ್ನರ್‌ಗಳು, ಕೇಂದ್ರ ಮಂತ್ರಿಗಳು, ಪದನಿಮಿತ್ತ ಸದಸ್ಯರು ಮತ್ತು ನೀತಿ ಆಯೋಗದ ಉಪಾಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಲಿದ್ದಾರೆ. ಆಡಳಿತ ಮಂಡಳಿ 8ನೇ ಸಭೆಯ ಪೂರ್ವಸಿದ್ಧತಾ ಪೂರ್ವಭಾವಿಯಾಗಿ ಎರಡನೇ ಮುಖ್ಯ ಕಾರ್ಯದರ್ಶಿಗಳ ಸಭೆಯನ್ನು ಜನವರಿ 2023 ರಲ್ಲಿ ನಡೆಸಲಾಗಿತ್ತು. ಇಲ್ಲಿ ಈ ವಿಷಯಗಳನ್ನು ವ್ಯಾಪಕವಾಗಿ ಚರ್ಚಿಸಲಾಗಿತ್ತು".

ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಭಾರತ ತನ್ನ ಆರ್ಥಿಕ ಅಭಿವೃದ್ಧಿ ಪಥದಲ್ಲಿ ಒಂದು ಹಂತದಲ್ಲಿದೆ. ಅದು ಮುಂದಿನ 25 ವರ್ಷಗಳಲ್ಲಿ ವೇಗವರ್ಧಿತ ಬೆಳವಣಿಗೆಯನ್ನು ಸಾಧಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಈ ಸಂದರ್ಭದಲ್ಲಿ, ಆಡಳಿತ ಮಂಡಳಿ 8ನೇ ಸಭೆಯು 2047ರ ವೇಳೆಗೆ ವಿಕ್ಷಿತ್ ಭಾರತ್‌ಗೆ ಮಾರ್ಗಸೂಚಿಯನ್ನು ರಚಿಸಲು ಅವಕಾಶವನ್ನು ಒದಗಿಸುತ್ತದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದೆ.

ಭಾರತದ ಸಾಮಾಜಿಕ ಆರ್ಥಿಕ ಬೆಳವಣಿಗೆ ಮತ್ತು ಪರಿವರ್ತನೆಯು ಪ್ರಪಂಚದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುವುದರಿಂದ ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಆಯೋಗ ಹೇಳಿದೆ. ಆಡಳಿತ ಮಂಡಳಿಯ 8ನೇ ಸಭೆಯು ಭಾರತದ G20 ಪ್ರೆಸಿಡೆನ್ಸಿಯ ಹಿನ್ನೆಲೆಯಲ್ಲಿ ಕೂಡ ನಡೆಯುತ್ತಿದೆ. ಭಾರತದ G20 ಧ್ಯೇಯವಾಕ್ಯ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಅದರ ನಾಗರಿಕ ಮೌಲ್ಯಗಳನ್ನು ಮತ್ತು ಪ್ರತಿ ದೇಶದ ಪಾತ್ರದ ದೃಷ್ಟಿಕೋನವನ್ನು ತಿಳಿಸುತ್ತದೆ.

"ಉದಯೋನ್ಮುಖ ಜಗತ್ತು ಮೌಲ್ಯಾಧಾರಿತ ನಾಯಕತ್ವವನ್ನು ಒದಗಿಸುವ ಭಾರತದ ಸಾಮರ್ಥ್ಯದ ಬಗ್ಗೆ ಅಪಾರ ಭರವಸೆಯನ್ನು ಹೊಂದಿದೆ. ಈ ವಿಶಿಷ್ಟ ಅಭಿವೃದ್ಧಿ ಪಥವನ್ನು ಸಾಧಿಸುವಲ್ಲಿ ಕೇಂದ್ರ ಮತ್ತು ರಾಜ್ಯಗಳು ಮಹತ್ವದ ಪಾತ್ರವನ್ನು ವಹಿಸಿವೆ" ಎಂದು ಆಯೋಗ ಹೇಳಿದೆ.

ರಾಜ್ಯಗಳು ಬೆಳೆದಾಗ ದೇಶ ಬೆಳೆಯುತ್ತದೆ: ಭಾರತದ ಬೆಳವಣಿಗೆಯು ರಾಜ್ಯಗಳ ಬೆಳವಣಿಗೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಪ್ರಧಾನಿಯವರು ತಮ್ಮ 76ನೇ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಸ್ತಾಪಿಸಿದಂತೆ, 'ನಮ್ಮ ರಾಜ್ಯಗಳು ಬೆಳೆದಾಗ ಭಾರತವು ಬೆಳೆಯುತ್ತದೆ'. ಇದು ಮುಂದಿನ ಕಾಲು ಶತಮಾನದವರೆಗೆ ಭಾರತದ ಸಮಗ್ರ ಮತ್ತು ಸುಸ್ಥಿರ ದೃಷ್ಟಿಯ ಮಾರ್ಗದರ್ಶಿ ಮನೋಭಾವವಾಗಿದೆ. ಈ ದೃಷ್ಟಿಕೋನವನ್ನು ಸಾಧಿಸಲು, ಆಡಳಿತ ಮಂಡಳಿ 8ನೇ ಸಭೆಯು ಕೇಂದ್ರ-ರಾಜ್ಯ ಸಹಕಾರವನ್ನು ಬಲಪಡಿಸಲು ಮತ್ತು ವಿಕ್ಷಿತ್ ಭಾರತ್ @2047 ರ ಗುರಿಯನ್ನು ಸಾಧಿಸಲು ಪಾಲುದಾರಿಕೆ ರೂಪಿಸಲು ವೇದಿಕೆಯನ್ನು ಒದಗಿಸುತ್ತದೆ.

ಇದನ್ನೂ ಓದಿ:ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗ ಆಡಳಿತ ಮಂಡಳಿ ಸಭೆ; ತೆಲಂಗಾಣ ಸಿಎಂ ಗೈರು

ABOUT THE AUTHOR

...view details