ಕರ್ನಾಟಕ

karnataka

ETV Bharat / bharat

ಪಿಎಂ ಮೋದಿ ನೇತೃತ್ವದಲ್ಲಿಂದು ನೀತಿ ಆಯೋಗದ 6ನೇ ಆಡಳಿತ ಮಂಡಳಿ ಸಭೆ - NITI Aayog

ಇಂದು ನೀತಿ ಆಯೋಗದ 6ನೇ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಕೇಂದ್ರಾಡಳಿತ ಪ್ರದೇಶವಾಗಿ ಜಮ್ಮು-ಕಾಶ್ಮೀರ ಹಾಗೂ ಮೊದಲ ಬಾರಿ ಲಡಾಖ್ ಸಭೆಗೆ ಹಾಜರಾಗಲಿವೆ.

PM Modi to chair 6th Governing Council meeting of NITI Aayog today
ಪಿಎಂ ಮೋದಿ ನೇತೃತ್ವದಲ್ಲಿ ಇಂದು ನೀತಿ ಆಯೋಗದ 6ನೇ ಆಡಳಿತ ಮಂಡಳಿ ಸಭೆ

By

Published : Feb 20, 2021, 7:50 AM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನೀತಿ ಆಯೋಗದ 6ನೇ ಆಡಳಿತ ಮಂಡಳಿ ಸಭೆ ನಡೆಯಲಿದೆ.

ಸಭೆಯಲ್ಲಿ ಕೃಷಿ, ಮೂಲಸೌಕರ್ಯ, ಉತ್ಪಾದನೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಸಮಾಜದ ಕಟ್ಟಕಡೆಯ ಜನಸಮುದಾಯಕ್ಕೆ ಆರೋಗ್ಯ ಸೇರಿದಂತೆ ಇತರ ಸೌಲಭ್ಯಗಳು ದೊರಕುವ ಕುರಿತಂತೆ ಚರ್ಚಿಸಲಾಗುವುದು ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಗಲ್ವಾನ್ ಸಂಘರ್ಷದ ವಿಡಿಯೋ ರಿಲೀಸ್ ಮಾಡಿದ ಚೀನಾ!

ನೀತಿ ಆಯೋಗದ ಆಡಳಿತ ಮಂಡಳಿ ಸಭೆಯು ಅಂತರವಲಯ, ಅಂತರವಿಭಾಗೀಯ ಸಮಸ್ಯೆಗಳನ್ನು ಚರ್ಚಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಪ್ರಧಾನಿ ಮೋದಿ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು, ಕೇಂದ್ರ ಸಚಿವರು, ಆಡಳಿತ ಮಂಡಳಿಯ ಉಪಾಧ್ಯಕ್ಷ ರಾಜೀವ್ ಕುಮಾರ್ ಮತ್ತು ಅದರ ಮಾಜಿ ಅಧಿಕಾರಿಗಳು, ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಮತ್ತು ಇತರ ಅಧಿಕಾರಿಗಳು, ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾಗಿ ಜಮ್ಮು-ಕಾಶ್ಮೀರ ಹಾಗೂ ಮೊದಲ ಬಾರಿ ಲಡಾಖ್​​ ಆಡಳಿತ ಮಂಡಳಿ ಸಭೆಗೆ ಹಾಜರಾಗಲಿವೆ.

ABOUT THE AUTHOR

...view details