ನವದೆಹಲಿ:ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ನೇತೃತ್ವದಲ್ಲಿ ಜಿ-7 ಶೃಂಗಸಭೆ ಶುರುವಾಗಿದೆ. ಭಾರತ, ಆಸ್ಟ್ರೇಲಿಯಾ, ಕೊರಿಯಾ ಗಣತಂತ್ರ ಮತ್ತು ದಕ್ಷಿಣ ಆಫ್ರಿಕಾಗಳನ್ನು ಜಿ-7 ಶೃಂಗಕ್ಕೆ ಅತಿಥಿ ರಾಷ್ಟ್ರಗಳನ್ನಾಗಿ ಆಹ್ವಾನಿಸಿದೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ‘ಬಿಲ್ಡಿಂಗ್ ಬ್ಯಾಕ್ ಸ್ಟ್ರಾಂಗ್, ಬಿಲ್ಡಿಂಗ್ ಬ್ಯಾಕ್ ಟುಗೆದರ್ ಮತ್ತು ಬಿಲ್ಡಿಂಗ್ ಬ್ಯಾಕ್ ಗ್ರೀನರ್’ ಎಂಬ ವಿಷಯಗಳನ್ನು ಕುರಿತು ಮಾತನಾಡಲಿದ್ದಾರೆ.
ಜೂನ್ 11 ರಿಂದ 13 ರವರೆಗೆ ನಡೆಯುತ್ತಿರುವ ಜಿ- 7 ಶೃಂಗಸಭೆಯಲ್ಲಿ ಭಾಗವಹಿಸುವಂತೆ ಯುಕೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು ಪ್ರಧಾನಿ ಅವರನ್ನು ಆಹ್ವಾನಿಸಿದ್ದರು. ಆದರೆ, ಭಾರತದಲ್ಲಿ ಕೋವಿಡ್ ಹೆಚ್ಚುತ್ತಿರುವ ಕಾರಣ ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಖುದ್ದಾಗಿ ಭಾಗವಹಿಸುವುದಿಲ್ಲ. ವರ್ಚುಯಲ್ ಮೂಲಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.