ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಇಂದು 77ನೇ ಆವೃತ್ತಿಯ ಮನ್ ಕೀ ಬಾತ್ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಎರಡನೇ ಅಲೆ ಕೊರೊನಾ ವೈರಸ್ ಮಧ್ಯೆ ನಮೋ ಮತ್ತಷ್ಟು ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
Mann Ki Baat: ದೇಶವನ್ನುದ್ದೇಶಿಸಿ ಮಾತನಾಡಲಿರುವ ನರೇಂದ್ರ ಮೋದಿ - ಮೋದಿ ಮನ್ ಕೀ ಬಾತ್
ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಇಂದು 77ನೇ ಆವೃತ್ತಿ ಮನ್ ಕೀ ಬಾತ್ನಲ್ಲಿ ಭಾಗಿಯಾಗಲಿದ್ದಾರೆ.
ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ದೇಶದಲ್ಲಿ 7 ವರ್ಷ ಪೂರೈಕೆ ಮಾಡಿದ್ದು, ಈ ದಿನವೇ ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಬೆಳಗ್ಗೆ 11 ಗಂಟೆಗೆ ಮನ್ ಕೀ ಬಾತ್ನಲ್ಲಿ ನಮೋ ಭಾಗಿಯಾಗಿ ಮಾತನಾಡಲಿದ್ದು, ಆಲ್ ಇಂಡಿಯಾ ರೆಡಿಯೋದಲ್ಲಿ ಪ್ರಸಾರಗೊಳ್ಳಲಿದೆ. ಇದು ಪ್ರಧಾನಿ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮದ ಮುಂದುವರೆದ ಆವೃತ್ತಿಯಾಗಿದೆ.
ಕಳೆದ ತಿಂಗಳ ಆವೃತ್ತಿಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಪ್ರೀತಿ ಪಾತ್ರರಲ್ಲಿ ಅನೇಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಎರಡನೇ ಅಲೆ ದೇಶವನ್ನು ಬೆಚ್ಚಿಬೀಳಿಸಿದೆ ಎಂದು ತಿಳಿಸಿದ್ದರು.