ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 11 ಗಂಟೆಗೆ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಇದು ಈ ವರ್ಷದ ಅವರ ಕೊನೆಯ ಮನ್ ಕಿ ಬಾತ್ ಆಗಿದ್ದರಿಂದ ಸ್ವಲ್ಪ ವಿಶೇಷತೆ ಪಡೆದುಕೊಂಡಿದೆ. ಇಂದಿನ ಮನ್ ಕಿ ಬಾತ್ ಬಗ್ಗೆ ಮೋದಿ ಟ್ವೀಟ್ ಮಾಡಿಕೊಂಡಿದ್ದಾರೆ. ಬರುವ 2021ನೇ ವರ್ಷವನ್ನು ಯಾವ ರೀತಿ ಮುನ್ನಡೆಸುವಿರಿ ಅನ್ನೋದನ್ನು ಹಂಚಿಕೊಳ್ಳಿ ಎಂದು ವಾರದ ಹಿಂದೆಯೇ ಈ ಬಗ್ಗೆ ಟ್ವೀಟ್ ಮಾಡಿದ್ದರು.