ಕರ್ನಾಟಕ

karnataka

ETV Bharat / bharat

Mann ki Baat: ಪ್ರಧಾನಿ ಮೋದಿಯಿಂದ ಇಂದು ಈ ವರ್ಷದ ಮೊದಲ ಮನ್ ಕಿ ಬಾತ್ - ಇಂದಿನ ಮನ್​ ಕಿ ಬಾತ್​

ಕಳೆದ ಬಾರಿಯ ಮನ್​ ಕಿ ಬಾತ್​ನಲ್ಲಿ ಕೊರೊನಾ ವೈರಸ್ ಮತ್ತು ಇತರ ವಿಚಾರಗಳ ಬಗ್ಗೆ ಮಾತನಾಡಿದ್ದ ಪ್ರಧಾನಿ ಮೋದಿ ಇಂದು ಮಹಾತ್ಮ ಗಾಂಧೀಜಿಯವರ ಪುಣ್ಯ ತಿಥಿಯ ಬಗ್ಗೆ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.

PM Modi to address Mann ki Baat today
Mann ki Baat: ಪ್ರಧಾನಿ ಮೋದಿಯಿಂದ ಇಂದು ಈ ವರ್ಷದ ಮೊದಲ ಮನ್ ಕಿ ಬಾತ್

By

Published : Jan 30, 2022, 6:30 AM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 11:30ಕ್ಕೆ ಮಾಸಿಕ ರೇಡಿಯೊ ಕಾರ್ಯಕ್ರಮವಾದ ಮನ್ ಕಿ ಬಾತ್​​ನ 85ನೇ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಮಾಹಿತಿ ನೀಡಿದೆ.

ಮಹಾತ್ಮ ಗಾಂಧೀಜಿ ಅವರ ಪುಣ್ಯತಿಥಿ ಮತ್ತು ಹುತಾತ್ಮರ ದಿನದ ಅಂಗವಾಗಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಹೇಳಿದ್ದು, 85ನೇ ಸಂಚಿಕೆಯ ಮನ್​ ಕಿ ಬಾತ್ ಈ ವರ್ಷ ಮೊದಲ ಸಂಚಿಕೆಯಾಗಿದೆ ಎಂಬುದು ವಿಶೇಷ.

ಕಳೆದ ಮನ್​ ಕಿ ಬಾತ್​ ಡಿಸೆಂಬರ್ 26ರಂದು ನಡೆದಿದ್ದು, ಈ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಕೊರೊನಾ ವೈರಸ್ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದ್ದರು. ಈ ಹಿಂದೆ 'ಮನ್ ಕಿ ಬಾತ್' ಆವೃತ್ತಿಗೆ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಪ್ರಧಾನಿ ಕರೆ ನೀಡಿದ್ದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಮನ್ ಕಿ ಬಾತ್ ಭಾಷಣವನ್ನು ಪ್ರತೀ ತಿಂಗಳ ಕೊನೆಯ ಭಾನುವಾರದಂದು ಪ್ರಸಾರ ಮಾಡಲಾಗುತ್ತದೆ. ಕಾರ್ಯಕ್ರಮವನ್ನು ಆಲ್​ ಇಂಡಿಯಾ ರೇಡಿಯೋ ಮತ್ತು ದೂರದರ್ಶನ ಮತ್ತು ಮೊಬೈಲ್ ಅಪ್ಲಿಕೇಷನ್​ಗಳಲ್ಲಿ ಪ್ರಸಾರ ಮಾಡಲಾಗುತ್ತದೆ.

ಇದನ್ನೂ ಓದಿ:2022ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಾಬಾ ಇಕ್ಬಾಲ್ ಸಿಂಗ್ ನಿಧನ

ABOUT THE AUTHOR

...view details