ಕರ್ನಾಟಕ

karnataka

ETV Bharat / bharat

ದೀನ್​ ದಯಾಳ್​ ಉಪಾಧ್ಯಾಯ ಪುಣ್ಯತಿಥಿ: ಸಮರ್ಪಣಾ ದಿವಸ್​​ ಕಾರ್ಯಕ್ರಮದಲ್ಲಿ ಪಿಎಂ ಭಾಷಣ - ಸಮರ್ಪಣ ದಿವಸ್​​ ಕಾರ್ಯಕ್ರಮ

ಬಿಜೆಪಿ ಇಂದು ಸಂಸ್ಥಾಪಕ ದೀನ್​ ದಯಾಳ್​ ಉಪಾಧ್ಯಾಯ ಅವರ ಪುಣ್ಯತಿಥಿಯ ನಿಮಿತ್ತ ಸಮರ್ಪಣಾ ದಿವಸ್​​ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಸೇರಿದಂತೆ ಪಕ್ಷದ ನಾಯಕರು ಗೌರವ ನಮನ ಸಲ್ಲಿಸಿದರು.

ಪ್ರಧಾನಿ ನರೇಂದ್ರ ಮೋದಿ
PM Modi

By

Published : Feb 11, 2021, 1:08 PM IST

Updated : Feb 11, 2021, 1:25 PM IST

ನವದಹಲಿ:ಇಂದು ಬಿಜೆಪಿ ಪಕ್ಷದ ಸಂಸ್ಥಾಪಕ ದೀನ್​ ದಯಾಳ್​ ಉಪಾಧ್ಯಾಯ ಅವರ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರು ಸಮರ್ಪಣ ದಿವಸ್​​ ಕಾರ್ಯಕ್ರಮವನ್ನು ಆಯೋಜನೆ ಮಾಡಿ ದಯಾಳ್​ ಅವರಿಗೆ ಗೌರವ ನಮನ ಸಲ್ಲಿಸಿದರು.

ಸಮರ್ಪಣ ದಿವಸ್​​ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದ್ದು, ದಯಾಳ್​ ಅವರ ಕೊಡುಗೆಗಳನ್ನು ಸ್ಮರಿಸಿದರು. ದಯಾಳ್​ ಅವರು ಸಾಮಾನ್ಯ ವರ್ಗದ ಬಡಜನರಿಗೆ ರಕ್ಷಣೆ ನೀಡುವಂತಹ ಕೆಲಸ ಮಾಡಿದ್ದಾರೆ. ರಾಜ್ಯನೀತಿಯಲ್ಲಿ ರಾಜ್ಯಗಳ ವಿಭಜನೆಯ ಕೆಲಸ ತುಂಬಾ ತೊಡಕಿನಿಂದ ಕೂಡಿರುತ್ತದೆ. ಇದಕ್ಕೆ ನಮ್ಮ ಮುಂದೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಯಾವುದಾದರು ಹೊಸ ರಾಜ್ಯ ರಚನೆಯಾದರೆ ರಾಜ್ಯದಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಆದರೆ, ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ಮೂರು ರಾಜ್ಯಗಳ ರಚನೆಯಾಯಿತು. ಆದರೆ ಯಾವುದೇ ಸಂಘರ್ಷವಾಗಲಿ ನಡೆಯಲಿಲ್ಲ. ಇದು ದೀನ್​ ದಯಾಳ್​ ಜೀ ಅವರ ಸಂಸ್ಕಾರವನ್ನು ತೋರಿಸುತ್ತದೆ ಎಂದರು.

ಆ ಸಮಯದಲ್ಲಿ ಉತ್ತರಪ್ರದೇಶದಿಂದ ಉತ್ತರಾಖಂಡ್​, ಬಿಹಾರದಿಂದ ಜಾರ್ಖಂಡ್​, ಮಧ್ಯಪ್ರದೇಶದಿಂದ ಛತ್ತೀಸ್​​ಗಢ ಪ್ರತ್ಯೇಕಗೊಳಿಸಿ ಮೂರು ರಾಜ್ಯಗಳಾಗಿ ರಚನೆ ಮಾಡಲಾಯಿತು. ಆ ಸಮಯದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಾಗಲಿ, ದೂರುಗಳಾಗಲಿ ಕೇಳಿ ಬರಲಿಲ್ಲಿ. ಬದಲಾಗಿ ಪ್ರತಿಯೊಂದು ರಾಜ್ಯದಲ್ಲೂ ಉತ್ಸವದ ವಾತಾವರಣ ನಿರ್ಮಾಣವಾಗಿತ್ತು. ಇದಕ್ಕೆ ದಯಾಳ್​ ಅವರ ಕಾರ್ಯವೇ ಸಾಕ್ಷಿ ಎಂದರು.

ಓದಿ: ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ -2021 ಉದ್ಘಾಟಿಸಿದ ಪಿಎಂ ಮೋದಿ

ನಮ್ಮ ಸರ್ಕಾರ ಲಡಾಖ್​ ಮತ್ತು ಕಾರ್ಗಿಲ್​​​ಗಳನ್ನು ಪ್ರತ್ಯೇಕ ರಾಜ್ಯಗಳಾಗಿ ಮಾಡಿ ಸ್ಥಾನಮಾನನ್ನು ನೀಡಿತು. ಅದರಂತೆ ಜಮ್ಮು ಮತ್ತು ಕಾಶ್ಮೀರದ ಜನರ ಆಕಾಂಕ್ಷೆಯನ್ನು ಈಡೇರಿಸುವಲ್ಲಿ ಸರ್ಕಾರ ಸಫಲವಾಗಿದೆ. ಇದಕ್ಕೆ ನಮ್ಮ ಪ್ರೇರಣಾ ರಾಷ್ಟ್ರ ನೀತಿಯೇ ಕಾರಣವಾಗಿದೆ. ಬಹುಮತದಿಂದ ಸರ್ಕಾರ ನಡೆಯುತ್ತದೆ. ಆದರೆ ದೇಶ ಮಾತ್ರ ಜನರ ಸಮ್ಮತಿಯಿಂದ ನಡೆಯುತ್ತದೆ. ನಾವು ಕೇವಲ ಸರ್ಕಾರವನ್ನು ನಡೆಸಲು ಬಂದಿಲ್ಲ. ಬದಲಾಗಿ ದೇಶವನ್ನು ಮುಂದುರೆಸಿಕೊಂಡು ಹೋಗಲು ಬಂದಿದ್ದೇವೆ ಎಂದರು.

Last Updated : Feb 11, 2021, 1:25 PM IST

ABOUT THE AUTHOR

...view details