ಕರ್ನಾಟಕ

karnataka

ETV Bharat / bharat

ಇಂದು ಪ್ರಧಾನಿ ಮೋದಿ 'ಮನ್​ ಕಿ ಬಾತ್​' 81 ನೇ ಆವೃತ್ತಿ ಪ್ರಸಾರ - ದೂರದರ್ಶನ

ಇಂದು ಮನ್​ ಕಿ ಬಾತ್​ನ 81 ನೇ ಆವೃತ್ತಿ ಪ್ರಸಾರವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ

By

Published : Sep 26, 2021, 6:54 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್​ನ 81 ನೇ ಆವೃತ್ತಿಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಕಾರ್ಯಕ್ರಮವು ರೇಡಿಯೋ, ದೂರದರ್ಶನದ ನೆಟ್​ವರ್ಕ್​ ಮತ್ತು ಮೊಬೈಲ್​ ಅಪ್ಲಿಕೇಶನ್​​ನಲ್ಲಿ ಪ್ರಸಾರವಾಗಲಿದೆ.

ಪ್ರಧಾನ ಮಂತ್ರಿ ಮೋದಿ ಅಮೆರಿಕ ಭೇಟಿಯ ನಂತರ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಅವರು ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದು, ವಿಶ್ವಸಂಸ್ಥೆ ಸಾಮಾನ್ಯ ಸಭೆಯ 76 ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಅಂತಾರಾಷ್ಟ್ರೀಯ ನಾಯಕರು ಮತ್ತು ರಾಜತಾಂತ್ರಿಕರು ಇದಕ್ಕೆ ಸಾಕ್ಷಿಯಾದರು.

ವಾಷಿಂಗ್ಟನ್​ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಜತೆ ಮೋದಿ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು. ಆಸ್ಟ್ರೇಲಿಯಾ, ಜಪಾನ್​ ಪ್ರಧಾನಿ ಅವರನ್ನು ಭೇಟಿಯಾಗಿ ಸೌಹಾರ್ದಯುತ ಮಾತುಕತೆಯಲ್ಲಿ ಪಾಲ್ಗೊಂಡರು. ವಾಷಿಂಗ್ಟನ್‌ನಲ್ಲಿ ನಡೆದ ಮೊದಲ ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಇಂದು ಅಮೆರಿಕ ಪ್ರವಾಸ ಮುಗಿಸಿ ಅವರು ದೇಶಕ್ಕೆ ಮರಳುತ್ತಿದ್ದಾರೆ.

ಇದನ್ನೂ ಓದಿ: 'ವೈಭವ' ಮರಳಿ ತರುವತ್ತ ಮೋದಿ: ಅಮೆರಿಕದಿಂದ 157 ಪುರಾತನ ಕಲಾಕೃತಿಗಳು ವಾಪಸ್​

ಆಗಸ್ಟ್ 29 ರಂದು ಮಾಸಿಕ ರೇಡಿಯೋ ಕಾರ್ಯಕ್ರಮ ಮನ್​ ಕಿ ಬಾತ್​ನ 80 ನೇ ಆವೃತ್ತಿಯನ್ನುದ್ದೇಶಿಸಿ ಪ್ರಧಾನಿ ಮಾತನಾಡಿದ್ದರು. ‘ಮನ್​ ಕಿ ಬಾತ್’ ಪ್ರಧಾನಿಯವರ ಮಾಸಿಕ ರೇಡಿಯೋ ಕಾರ್ಯಕ್ರಮವಾಗಿದ್ದು, ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಸಾರವಾಗುತ್ತದೆ.

ABOUT THE AUTHOR

...view details