ನವದೆಹಲಿ:ಸಣ್ಣ ಆನ್ಲೈನ್ ಪಾವತಿಗಗಳು ದೊಡ್ಡ ಡಿಜಿಟಲ್ ಆರ್ಥಿಕತೆಯನ್ನು ಸೃಷ್ಟಿಸಲು ಸಹಾಯ ಮಾಡುತ್ತವೆ. ದೇಶದಲ್ಲೀಗ 20 ಸಾವಿರ ಕೋಟಿ ರೂಪಾಯಿ ಮೌಲ್ಯದ ಡಿಜಿಟಲ್ ವಹಿವಾಟು ನಡೆಯುತ್ತಿದೆ. ಮುಂದೊಂದು ದಿನ ಇದರ ಹರಿವು ಇನ್ನಷ್ಟು ಹೆಚ್ಚಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಮಾಸಿಕ ಕಾರ್ಯಕ್ರಮವಾದ ಮನ್ ಕೀ ಬಾತ್ನಲ್ಲಿ ಡಿಜಿಟಲ್ ಪೇಮೆಂಟ್ ಬಗ್ಗೆ ಪ್ರಸ್ತಾಪಿಸಿದ ಅವರು, ದೇಶದಲ್ಲಿ ಈಗ ಪ್ರತಿದಿನ 20 ಸಾವಿರ ಕೋಟಿ ರೂಪಾಯಿ ಮೌಲ್ಯದ ಡಿಜಿಟಲ್ ವಹಿವಾಟು ನಡೆಯುತ್ತಿದೆ. ಮಾರ್ಚ್ ತಿಂಗಳೊಂದರಲ್ಲೇ 10 ಲಕ್ಷ ಕೋಟಿ ರೂಪಾಯಿ ಆನ್ಲೈನ್ ವಹಿವಾಟು ನಡೆದಿದೆ. ಇದು ಆರ್ಥಿಕ ಸೌಲಭ್ಯಗಳನ್ನು ಹೆಚ್ಚಿಸುವುದಲ್ಲದೆ ಪ್ರಾಮಾಣಿಕತೆಯ ವಾತಾವರಣವನ್ನೂ ಉತ್ತೇಜಿಸಿದೆ ಎಂದರು.
ಸಣ್ಣ ಆನ್ಲೈನ್ ಪಾವತಿಗಳು ದೊಡ್ಡ ಡಿಜಿಟಲ್ ಆರ್ಥಿಕತೆಯನ್ನು ನಿರ್ಮಿಸಲು ಸಹಾಯ ಮಾಡುತ್ತಿವೆ. ಅನೇಕ ಹೊಸ ಫಿನ್ಟೆಕ್ ಸ್ಟಾರ್ಟಪ್ಗಳು ಬರಲಿವೆ. ಡಿಜಿಟಲ್ ಪಾವತಿಗಳು ಮತ್ತು ಸ್ಟಾರ್ಟಪ್ ಬಗ್ಗೆ ಮಾಹಿತಿ ಹೊಂದಿದ ಜನರು ಇತರರೊಂದಿಗೆ ತಮ್ಮ ಅನುಭವ ಹಂಚಿಕೊಂಡು ಅವರಿಗೂ ಇದರ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.