ಕರ್ನಾಟಕ

karnataka

ಕೊರೊನಾ ವಿರುದ್ಧದ ಯುದ್ಧದಲ್ಲಿ ಜಿಲ್ಲಾಧಿಕಾರಿಗಳು ಫೀಲ್ಡ್​ ಕಮಾಂಡರ್‌ಗಳಂತೆ: ಪಿಎಂ ಮೋದಿ

By

Published : May 18, 2021, 2:34 PM IST

Updated : May 18, 2021, 3:37 PM IST

ಕೊರೊನಾ ವಿರುದ್ಧದ ಯುದ್ಧದಲ್ಲಿ ನೀವೆಲ್ಲರೂ ಬಹಳ ಮುಖ್ಯ ಪಾತ್ರ ವಹಿಸುತ್ತಿದ್ದೀರಿ. ಒಂದು ರೀತಿಯಲ್ಲಿ, ನೀವು ಈ ಯುದ್ಧದ ಫೀಲ್ಡ್​ ಕಮಾಂಡರ್​ಗಳು ಎಂದು ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳನ್ನು ಶ್ಲಾಘಿಸಿದರು.

Modi speechPM Modi stresses on local containment zones
ಪಿಎಂ ಮೋದಿ

ನವದೆಹಲಿ:ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ರಾಜ್ಯಗಳು ಮತ್ತು ಜಿಲ್ಲೆಗಳ ಕ್ಷೇತ್ರ ಅಧಿಕಾರಿಗಳನ್ನು "ಫೀಲ್ಡ್ ಕಮಾಂಡರ್‌ಗಳು" ಎಂದು ಕರೆದ ಪ್ರಧಾನಿ ನರೇಂದ್ರ ಮೋದಿ ಭಾರತ ಎರಡನೇ ತರಂಗದೊಂದಿಗೆ ಹೋರಾಡುತ್ತಿರುವಾಗ ಲೋಕಲ್ ಕಂಟೇನ್ಮೆಂಟ್ ಝೋನ್​ ಮತ್ತು ಕೊರೊನಾ ಪರೀಕ್ಷೆಗಳ ಮಹತ್ವವನ್ನು ಒತ್ತಿ ಹೇಳಿದರು.

ಕೊರೊನಾ ಸೋಂಕು ಉಲ್ಬಣಿಸುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ನಾನಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿದರು.

ಬಳಿಕ ಮಾತನಾಡಿದ ಅವರು, "ಕೊರೊನಾ ವಿರುದ್ಧದ ಯುದ್ಧದಲ್ಲಿ ನೀವೆಲ್ಲರೂ ಬಹಳ ಮುಖ್ಯ ಪಾತ್ರ ವಹಿಸುತ್ತಿದ್ದೀರಿ. ಒಂದು ರೀತಿಯಲ್ಲಿ, ನೀವು ಈ ಯುದ್ಧದ ಫೀಲ್ಡ್​ ಕಮಾಂಡರ್​ಗಳು. ಈ ವೈರಸ್ ವಿರುದ್ಧ ನಮ್ಮ ಶಸ್ತ್ರಾಸ್ತ್ರಗಳು ಸ್ಥಳೀಯ ಧಾರಕ ವಲಯಗಳು, ಆಕ್ರಮಣಕಾರಿ ಪರೀಕ್ಷೆ, ಜನರಿಗೆ ಸರಿಯಾದ ಮತ್ತು ಸಂಪೂರ್ಣ ಮಾಹಿತಿ ನೀಡುವುದು ಎಂದು ಹೇಳಿದರು.

ಕೊರೊನಾ ವಿರುದ್ಧದ ಯುದ್ಧದಲ್ಲಿ ಜಿಲ್ಲಾಧಿಕಾರಿಗಳು ಫೀಲ್ಡ್​ ಕಮಾಂಡರ್‌ಗಳಂತೆ: ಪಿಎಂ ಮೋದಿ

ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಈಗ ಅನೇಕ ರಾಜ್ಯಗಳಲ್ಲಿ ಕಡಿಮೆಯಾಗುತ್ತಿದೆ. ಆದರೆ, ಇನ್ನೂ ಹಲವಾರು ರಾಜ್ಯಗಳಲ್ಲಿ ಹೆಚ್ಚುತ್ತಿದೆ. ಡೇಟಾ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾವು ಹೆಚ್ಚು ಜಾಗರೂಕರಾಗಿರಬೇಕು. ಕಳೆದ ಒಂದು ವರ್ಷದ ಪ್ರತಿಯೊಂದು ಸಭೆಯಲ್ಲೂ, ಪ್ರತಿಯೊಂದು ಜೀವವನ್ನೂ ಉಳಿಸುವುದು ನಮ್ಮ ಹೋರಾಟ ಎಂಬುದೇ ನನ್ನ ವಿನಂತಿಯಾಗಿದೆ ಎಂದು ತಿಳಿಸಿದರು.

ಪರೀಕ್ಷೆ, ಟ್ರ್ಯಾಕಿಂಗ್, ಚಿಕಿತ್ಸೆ: ಪರೀಕ್ಷೆ, ಟ್ರ್ಯಾಕಿಂಗ್, ಚಿಕಿತ್ಸೆ ಮತ್ತು ಕೋವಿಡ್ ಸೂಕ್ತ ನಡವಳಿಕೆ ಅಗತ್ಯ. ಇದಕ್ಕೆ ನಿರಂತರ ಒತ್ತು ನೀಡಬೇಕು. ಕೊರೊನಾ ಎರಡನೇ ತರಂಗದಲ್ಲಿ ನಾವು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಪಿಎಂ ಮೋದಿ ಹೇಳಿದರು.

ದೇಶದ ಪ್ರತಿ ಜಿಲ್ಲೆಯ ಆಸ್ಪತ್ರೆಗಳಲ್ಲಿ ಆಮ್ಲಜನಕ ಸ್ಥಾವರ: ಸೋಂಕು ಹರಡುವಿಕೆ ನಿಲ್ಲಿಸಬೇಕು. ದೈನಂದಿನ ಜೀವನಕ್ಕೆ ಸಂಬಂಧಿಸಿದ ಅಗತ್ಯ ಸಾಮಗ್ರಿಗಳ ಪೂರೈಕೆಯನ್ನು ಕಾಪಾಡಿಕೊಳ್ಳಬೇಕು. ಶೀಘ್ರವಾಗಿ ಪಿಎಂ ಕೇರ್ಸ್ ಮೂಲಕ ದೇಶದ ಪ್ರತಿ ಜಿಲ್ಲೆಯ ಆಸ್ಪತ್ರೆಗಳಲ್ಲಿ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಈ ಪ್ಲ್ಯಾಂಟ್​ಗಳು ಈಗಾಗಲೇ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ ಎಂದು ಹೇಳಿದರು.

ವ್ಯಾಕ್ಸಿನೇಷನ್ ಕೋವಿಡ್ ವಿರುದ್ಧ ಹೋರಾಟಕ್ಕೆ ಪ್ರಬಲ ಮಾರ್ಗ: ದೇಶವು ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದ ಊಹಾಪೋಹಗಳ ವಿರುದ್ಧ ಹೋರಾಡುವ ಅಗತ್ಯವಿದೆ. ವ್ಯಾಕ್ಸಿನೇಷನ್ ಕೋವಿಡ್ ವಿರುದ್ಧ ಹೋರಾಡಲು ಒಂದು ಪ್ರಬಲ ಮಾರ್ಗವಾಗಿದೆ. ಕೊರೊನಾ ಲಸಿಕೆ ಪೂರೈಕೆಯನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಆರೋಗ್ಯ ಸಚಿವಾಲಯವು ನಿರಂತರವಾಗಿ ವ್ಯವಸ್ಥೆಗಳನ್ನು ಸುವ್ಯವಸ್ಥಿತಗೊಳಿಸುತ್ತಿದೆ ಎಂದರು.

Last Updated : May 18, 2021, 3:37 PM IST

ABOUT THE AUTHOR

...view details