ಕರ್ನಾಟಕ

karnataka

By

Published : Sep 4, 2021, 12:00 PM IST

ETV Bharat / bharat

ನರ್ವಾಲ್-ಸಿಂಗರಾಜ್​​​ಗೆ ಪ್ರಧಾನಿ ಫೋನ್​ ಕರೆ.. ರಾಷ್ಟ್ರಪತಿ ಸೇರಿ ಗಣ್ಯರಿಂದ ಅಭಿನಂದನೆ

ಟೋಕಿಯೊ ಪ್ಯಾರಾಲಿಂಪಿಕ್​ನಲ್ಲಿ ಭಾರತಕ್ಕೆ ಈವರೆಗೆ 15 ಪದಕ ಲಭಿಸಿವೆ. ಶೂಟಿಂಗ್​​ನಲ್ಲಿ ಮನೀಶ್ ನರ್ವಾಲ್ ಚಿನ್ನದ ಪದಕ ಗೆದ್ದುಕೊಂಡರೆ, ಸಿಂಗರಾಜ್​ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ.

pm-modi-spoke-to-manish-narwal-and-singhraj-adhana
ಮನೀಶ್ ನರ್ವಾಲ್-ಸಿಂಗರಾಜ್​​​ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ

ಹೈದರಾಬಾದ್: ಟೋಕಿಯೊ ಪ್ಯಾರಾಲಿಂಪಿಕ್(Tokyo Paralympics)​ನಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದೀಗ P4​​​ ಮಿಶ್ರ 50 ಮೀಟರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರೆ, ಸಿಂಗರಾಜ್​ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಈ ಇಬ್ಬರು ಸಾಧಕರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಇಬ್ಬರಿಗೂ ಅಭಿನಂದಿಸಿದ್ದಾರೆ.

ಅಲ್ಲದೆ ಟ್ವೀಟ್​​ನಲ್ಲಿ ಶುಭ ಹಾರೈಸಿರುವ ಪ್ರಧಾನಿ ನರೇಂದ್ರ ಮೋದಿ, ಟೋಕಿಯೊ ಪ್ಯಾರಾಲಿಂಪಿಕ್​​ನಲ್ಲಿ ವೈಭವ ಮುಂದುವರಿಯುತ್ತಿದೆ. ಯುವ ಮತ್ತು ಅದ್ಭುತ ಪ್ರತಿಭಾನ್ವಿತ ಮನೀಶ್ ನರ್ವಾಲ್ ಅವರದ್ದು ಅತ್ಯುತ್ತಮ ಸಾಧನೆ. ಅವರು ಚಿನ್ನದ ಪದಕ ಗೆದ್ದಿರುವುದು ಭಾರತೀಯ ಕ್ರೀಡೆಗೆ ಒಂದು ವಿಶೇಷ ಕ್ಷಣವಾಗಿದೆ. ಅವರಿಗೆ ಅಭಿನಂದನೆಗಳು. ಅವರ ಭವಿಷ್ಯದ ದಿನಗಳಿಗೆ ಶುಭಾಶಯಗಳು ಎಂದಿದ್ದಾರೆ.

ಜತೆಗೆ ಇನ್ನೋರ್ವ ಶೂಟಿಂಗ್​ ಪಟು ಸಿಂಗರಾಜ ಕುರಿತು ಟ್ವೀಟ್ ಮಾಡಿ, ಮಹೋನ್ನತ ಸಿಂಗರಾಜ್ ಅಧಾನ ಈ ಬಾರಿ ಮಿಶ್ರ 50 ಮೀಟರ್ ಪಿಸ್ತೂಲ್ SH1 ಸ್ಪರ್ಧೆಯಲ್ಲಿ ಮತ್ತೊಂದು ಪದಕವನ್ನು ಗೆದ್ದಿದ್ದಾರೆ. ಅವರ ಸಾಧನೆಯಿಂದಾಗಿ ಭಾರತವು ಹೆಮ್ಮೆ ಪಡುತ್ತದೆ. ಅವರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.

ಇವರ ಜತೆ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಸಹ ಶುಭಾಶಯ ಕೋರಿದ್ದು, ಯುವ ಮನೀಶ್ ನರ್ವಾಲ್ ಶೂಟಿಂಗ್​ನಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ತ್ರಿವರ್ಣವನ್ನು ಎತ್ತರಕ್ಕೆ ಹಾರಿಸುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ನೀವು ಚಿಕ್ಕ ವಯಸ್ಸಿನಲ್ಲೇ ಅಪಾರ ಪ್ರತಿಭೆ ಮತ್ತು ಸಮರ್ಪಣೆಯನ್ನು ತೋರಿಸಿದ್ದೀರಿ. ಹೃತ್ಪೂರ್ವಕ ಅಭಿನಂದನೆಗಳು! ಭವಿಷ್ಯದಲ್ಲಿ ನೀವು ಅನೇಕ ಪ್ರಶಸ್ತಿಗಳನ್ನು ಗೆಲ್ಲಿ ಎಂದು ಹರಸಿದ್ದಾರೆ.

ಅಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಸಚಿವ ಕಿರಣ್ ರಿಜೀಜು ಸಹ ಇಬ್ಬರಿಗೂ ಶುಭಹಾರೈಸಿದ್ದು, ಶೂಟಿಂಗ್‌ನಲ್ಲಿ ಭಾರತ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದಿರುವುದು ಮತ್ತೊಂದು ಒಳ್ಳೆಯ ಸುದ್ದಿ ಮತ್ತು ಉತ್ತಮ ಕ್ಷಣವಾಗಿದೆ. ಚಿನ್ನದ ಪದಕ ಪಡೆದ ಮನೀಶ್ ನರ್ವಾಲ್ ಮತ್ತು ಬೆಳ್ಳಿ ಪದಕ ಗೆದ್ದ ಸಿಂಗರಾಜ್​ ಅವರಿಗೆ ಅಭಿನಂದನೆಗಳು ಎಂದಿದ್ದಾರೆ.

ಓದಿ:Tokyo Paralympics: ಶೂಟಿಂಗ್​ನಲ್ಲಿ ನರ್ವಾಲ್​ಗೆ ಚಿನ್ನ, ಸಿಂಗ​ರಾಜ್​ಗೆ ಬೆಳ್ಳಿ ಪದಕ

ABOUT THE AUTHOR

...view details