ಕರ್ನಾಟಕ

karnataka

ETV Bharat / bharat

Tokyo Paralympics: ಬೆಳ್ಳಿ ಗೆದ್ದ ಭಾವಿನಾ ಜೊತೆ ಪ್ರಧಾನಿ ಮಾತು: 3 ಕೋಟಿ ರೂ. ಘೋಷಿಸಿದ ಗುಜರಾತ್​ ಸರ್ಕಾರ - ಭಾವಿನಾ ಪಟೇಲ್

ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ಗಣ್ಯರು ಟೋಕಿಯೋ ಪ್ಯಾರಾಲಿಂಪಿಕ್ಸ್​​​ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಟೇಬಲ್​​ ಟೆನ್ನಿಸ್​ ಆಟಗಾರ್ತಿ ಭಾವಿನಾ ಪಟೇಲ್​​ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಬೆಳ್ಳಿ ಗೆದ್ದ ಭಾವಿನಾ ಜೊತೆ ಪ್ರಧಾನಿ ಮಾ
ಬೆಳ್ಳಿ ಗೆದ್ದ ಭಾವಿನಾ ಜೊತೆ ಪ್ರಧಾನಿ ಮಾ

By

Published : Aug 29, 2021, 4:45 PM IST

ನವದೆಹಲಿ/ಗುಜರಾತ್​:ಟೋಕಿಯೋ ಪ್ಯಾರಾಲಿಂಪಿಕ್ಸ್​​​ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಟೇಬಲ್​​ ಟೆನ್ನಿಸ್​ ಆಟಗಾರ್ತಿ ಭಾವಿನಾ ಪಟೇಲ್​​ಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಭಾವಿನಾಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿ, ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಟ್ವೀಟ್​ ಕೂಡ ಮಾಡಿರುವ ಪಿಎಂ ಮೋದಿ, "ಭಾವಿನಾ ಪಟೇಲ್ ಅವರು ನಮ್ಮ ಮನೆಗೆ (ಭಾರತಕ್ಕೆ) ಐತಿಹಾಸಿಕ ಬೆಳ್ಳಿ ಪದಕವನ್ನು ತಂದು ಇತಿಹಾಸ ಬರೆದಿದ್ದಾರೆ. ಅವರ ಜೀವನ ಪಯಣವು ಪ್ರೇರಕವಾಗಿದ್ದು, ಹೆಚ್ಚಿನ ಯುವಜನರನ್ನು ಕ್ರೀಡೆಯತ್ತ ಸೆಳೆಯುತ್ತದೆ" ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಮಾತ್ರವಲ್ಲದೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ಗಣ್ಯರು ಭಾವಿನಾ ಪಟೇಲ್​​ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಟೋಕಿಯೋ ಪ್ಯಾರಾಲಿಂಪಿಕ್ಸ್: ಪದಕವನ್ನು ಭಾರತೀಯರಿಗೆ ಅರ್ಪಿಸಿದ ಬೆಳ್ಳಿ ಹುಡುಗಿ ಭಾವಿನಾ

3 ಕೋಟಿ ರೂ. ನಗದು ಬಹುಮಾನ

ಗುಜರಾತ್​ನ ಮೆಹ್ಸಾನಾ ಜಿಲ್ಲೆಯ ಸಂಧಿಯಾ ಗ್ರಾಮದ ಭಾವಿನಾ ಪಟೇಲ್​​ಗೆ ಮುಖ್ಯಮಂತ್ರಿ ವಿಜಯ್​ ರೂಪಾನಿ 3 ಕೋಟಿ ರೂ. ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. "ಟೋಕಿಯೋ ಪ್ಯಾರಾಲಿಂಪಿಕ್ಸ್​​​ನಲ್ಲಿ ಮಾಡಿದ ಐತಿಹಾಸಿಕ ಸಾಧನೆಗಾಗಿ ರಾಜ್ಯ ಸರ್ಕಾರದ 'ದಿವ್ಯಾಂಗ್ ಖೇಲ್ ರತ್ನ ಪ್ರೋತ್ಸಾಹನ್ ಪುರಸ್ಕಾರ ಯೋಜನೆ' ಅಡಿಯಲ್ಲಿ ಮೆಹ್ಸಾನಾ ಜಿಲ್ಲೆಯ ಭಾವಿನಾ ಪಟೇಲ್‌ಗೆ ಸಿಎಂ ವಿಜಯ್​ ರೂಪಾನಿ ಅವರು 3 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದಾರೆ" ಎಂದು ಈ ಕುರಿತು ಗುಜರಾತ್​ ಮುಖ್ಯಮಂತ್ರಿ ಕಚೇರಿ (CMO) ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್​ ಮಾಡಿದೆ.

ABOUT THE AUTHOR

...view details