ನವದೆಹಲಿ: ದೇವಾಲಯದ ಆವರಣದಲ್ಲಿ ಚರ್ಮ ಅಥವಾ ರಬ್ಬರ್ ಪಾದರಕ್ಷೆಗಳನ್ನು ಧರಿಸುವುದನ್ನು ನಿಷೇಧಿಸಿರುವುದರಿಂದ ಕಾಶಿ ವಿಶ್ವನಾಥ ಧಾಮದಲ್ಲಿ ಕೆಲಸ ಮಾಡುವ ಹೆಚ್ಚಿನವರು ಬರಿಗಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ತಿಳಿದ ಪ್ರಧಾನಿ ನರೇಂದ್ರ ಮೋದಿ ಅವರು 100 ಜೋಡಿ ಸೆಣಬಿನ ಪಾದರಕ್ಷೆಗಳನ್ನು ಕಳುಹಿಸಿದ್ದಾರೆ.
ಅರ್ಚಕರು, ಸೇವೆ ಮಾಡುವ ಜನರು, ಭದ್ರತಾ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು ಮತ್ತು ಇತರ ಕೆಲಸಗಾರರು ತಮ್ಮ ಕರ್ತವ್ಯ ನಿರ್ವಹಿಸುವವರು ಚಳಿಯಲ್ಲಿ ಬರಿಗಾಲಿನಲ್ಲಿ ಇರಬೇಕಾಗಿಲ್ಲ ಎಂದು ಮೋದಿ ಅವರು ಸೆಣಬಿನ ಪಾದರಕ್ಷೆಗಳನ್ನು ಖರೀದಿಸಿ ಧಾಮಕ್ಕೆ ರವಾನಿಸಿದ್ದಾರೆ.
ಪಾದರಕ್ಷೆಗಳನ್ನು ಕಳುಹಿಸಿದ ಪ್ರಧಾನಿ ಮೋದಿ ಪ್ರಧಾನಿ ಮೋದಿ ಅವರು ಕಾಶಿ ವಿಶ್ವನಾಥ ಧಾಮದಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ವಾರಾಣಸಿಯ ಎಲ್ಲ ಸಮಸ್ಯೆಗಳು ಮತ್ತು ಬೆಳವಣಿಗೆಗಳ ಮೇಲೆ ನಿಗಾ ಇರಿಸಿದ್ದಾರೆ. ಇದು ಅವರ ಸೂಕ್ಷ್ಮ ವಿವರಗಳಿಗೆ ಮತ್ತು ಬಡವರ ಬಗ್ಗೆ ಕಾಳಜಿಗೆ ಮತ್ತೊಂದು ಉದಾಹರಣೆಯಾಗಿದೆ.
ಕಾಶಿ ವಿಶ್ವನಾಥ ದೇಗುಲದ ಆವರಣವನ್ನು ಬೃಹತ್ ಪ್ರಮಾಣದಲ್ಲಿ ವಿಸ್ತರಿಸಿ ಸಮುಚ್ಚಯವನ್ನು ಸುಂದರಗೊಳಿಸಿ ಕಳೆದ ತಿಂಗಳು ಮೋದಿ ಉದ್ಘಾಟಿಸಿದ್ದರು. ಈಗ ಅಲ್ಲಿನ ಕೆಲಸಗಾರರಿಗೆ ಸೆಣಬಿನ ಪಾದರಕ್ಷೆಗಳನ್ನು ಕಳುಹಿಸುವ ಮೂಲಕ ಅವರ ಮೇಲಿನ ಕಾಳಜಿ ಮತ್ತು ಪಾದರಕ್ಷೆಯ ಸಮಸ್ಯೆಕ್ಕೆ ಪರಿಹಾರ ನೀಡಿದ್ದಾರೆ.