ಗಾಂಧಿನಗರ(ಗುಜರಾತ್): ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ರಾಜ್ಯಗಳಲ್ಲಿ ಬಿಜೆಪಿಯ ಭರ್ಜರಿ ಜಯದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಗುಜರಾತ್ ವಿಧಾನಸಭೆ ಚುನಾವಣೆಯ ಮೇಲೆ ಕೇಂದ್ರೀಕೃತವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಗುಜರಾತ್ಗೆ ಭೇಟಿ ನೀಡಲಿದ್ದಾರೆ.
ಇಂದು ಮೋದಿ ಅವರು ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 10 ಗಂಟೆಗೆ ಆಗಮಿಸಲಿದ್ದು, ಅವರನ್ನು ಗುಜರಾತ್‌ನ ಬಿಜೆಪಿ ನಾಯಕರು ಸ್ವಾಗತಿಸಲಿದ್ದಾರೆ. ನಂತರ ಬೆಳಗ್ಗೆ 10.15ಕ್ಕೆ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಕೋಬಾದ ಕಮಲಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿವರೆಗೆ ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ.
ಒಂದು ಗಂಟೆಯ ರೋಡ್ ಶೋ ವೇಳೆ ಅನೇಕ ಅನೇಕರಿಗೆ ಅಭಿನಂದಿಸುವ ಕಾರ್ಯವೂ ನಡೆಯಲಿದೆ. ರೋಡ್ ಶೋಗಾಗಿ ವಿಮಾನ ನಿಲ್ದಾಣದಿಂದ ಕೋಬಾದವರೆಗಿನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆ ಒಡ್ಡಲಾಗುವುದು. ಈ ರೋಡ್ ಶೋನಲ್ಲಿ ಸುಮಾರು 4 ಲಕ್ಷ ಜನರು ಸೇರುವ ಸಾಧ್ಯತೆ ಇದೆ. ಪ್ರಧಾನಿ ಆಗಮನದ ನಿರೀಕ್ಷೆಯಲ್ಲಿರುವ ಗುಜರಾತ್ ಪೊಲೀಸರು ಮತ್ತು ಭದ್ರತಾ ಅಧಿಕಾರಿಗಳು ಗಾಂಧಿನಗರ ಮತ್ತು ಅಹಮದಾಬಾದ್ ನಡುವಿನ ಹೆದ್ದಾರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.
ಪಂಚಾಯ್ತಿಗಳ 1 ಲಕ್ಷ ಜನಪ್ರತಿನಿಧಿಗಳನ್ನುದ್ದೇಶಿಸಿ ಪಿಎಂ ಮಾತು:ಪಂಚಾಯತ್ ಸಂಸ್ಥೆಗಳ 100,000 ಚುನಾಯಿತ ಪ್ರತಿನಿಧಿಗಳ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ)ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಮಾಹಿತಿ ನೀಡಿದ್ದಾರೆ.
ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ: ಮೋದಿ ಅವರು ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ ‘ಖೇಲ್ ಮಹಾಕುಂಭ’ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಗಾಂಧಿನಗರ ಜಿಲ್ಲೆಯ ಲಾವಾಡ್‌ನಲ್ಲಿರುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದಲ್ಲಿ ಭಾಗಿಯಾಗಿ ಮಾತನಾಡಲಿದ್ದಾರೆ. ರೋಡ್‌ಶೋ ಸಮಯದಲ್ಲಿ ವಿವಿಧ ಎನ್‌ಜಿಒಗಳು, ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಪಕ್ಷದ ಸಂಸದರು, ಶಾಸಕರನ್ನುದ್ದೇಶಿಸಿ ಮೋದಿ ಭಾಷಣ: ಗುಜರಾತ್ ಬಿಜೆಪಿಯ ಕೇಂದ್ರ ಕಚೇರಿ ‘ಕಮಲಂ’ನಲ್ಲಿ ಮೋದಿ ಪಕ್ಷದ ಸಂಸದರು, ಶಾಸಕರು, ಪದಾಧಿಕಾರಿಗಳು ಮತ್ತು ರಾಜ್ಯದ ಕಾರ್ಯಕಾರಿ ಸದಸ್ಯರೊಂದಿಗೆ ಮಾತನಾಡಲಿದ್ದಾರೆ. ಅಹಮದಾಬಾದ್‌ನ GMDC ಮೈದಾನದಲ್ಲಿ ಮಹಾ ಪಂಚಾಯತ್ ಸಮ್ಮೇಳನ - 'ಮಾರು ಗಾಮ್, ಮಾರು ಗುಜರಾತ್' - ಸಹ ನಡೆಸಲಿದ್ದಾರೆ.
ಇದನ್ನೂ ಓದಿ:UP Result: ಯೋಗಿ ಸರ್ಕಾರದ 11 ಮಂದಿ ಸಚಿವರಿಗೆ ಜನತೆ ಗೇಟ್ ಪಾಸ್