ಕರ್ನಾಟಕ

karnataka

ETV Bharat / bharat

ಬಾಂಗ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲುವಾಸ ಅನುಭವಿಸಿದ್ದೇನೆ : ಪ್ರಧಾನಿ ಮೋದಿ - Prime Minister Narendra Modi speech

ಸ್ವಾತಂತ್ರ್ಯ ಹೋರಾಟದಲ್ಲಿ ಬಾಂಗ್ಲಾ ಸೈನಿಕರಿಗೆ ಜೊತೆಯಾಗಿ ನಿಂತ ಭಾರತೀಯ ಸೈನಿಕರ ಧೈರ್ಯ, ತ್ಯಾಗವನ್ನು ನಾವು ಮರೆಯಬಾರದು ಎಂದು ಇದೇ ವೇಳೆ ಮೋದಿ ನುಡಿದಿದ್ದಾರೆ..

pm modi revealed that he participated in  Bangladesh's Liberation protest
ಬಾಂಗ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲುವಾಸ ಅನುಭವಿಸಿದ್ದೇನೆ: ಪ್ರಧಾನಿ ಮೋದಿ

By

Published : Mar 26, 2021, 6:05 PM IST

ಢಾಕಾ, ಬಾಂಗ್ಲಾದೇಶ :ಬಾಂಗ್ಲಾದೇಶದ ವಿಮೋಚನೆಗಾಗಿ ಭಾರತದಲ್ಲಿ ನಡೆದ ಪ್ರತಿಭಟನೆಗಳಲ್ಲಿ ನಾನೂ ಭಾಗಿಯಾಗಿ, ಜೈಲುವಾಸ ಅನುಭವಿಸಿದ್ದೆ ಎಂದು ಪ್ರಧಾನಿ ಮೋದಿ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ್ದಾರೆ.

ಬಾಂಗ್ಲಾದೇಶ ಪಾಕಿಸ್ತಾನದಿಂದ ವಿಮೋಚನೆಗೊಂಡು 50 ವರ್ಷ ಪೂರೈಸಿದ ಬೆನ್ನಲ್ಲೇ ರಾಷ್ಟ್ರೀಯ ದಿನ ಆಯೋಜನೆ ಮಾಡಿದ್ದು, ಎರಡು ದಿನಗಳ ಬಾಂಗ್ಲಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಇದನ್ನೂ ಓದಿ: ನಿಕಿತಾ ತೋಮರ್ ಶೂಟೌಟ್ ಪ್ರಕರಣ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಈ ವೇಳೆ ಮಾತನಾಡಿರುವ ಮೋದಿ, ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟ ನನ್ನ ಜೀವನದಲ್ಲೂ ಅತ್ಯಂತ ಮುಖ್ಯವಾದುದು. ನಾನು ಮತ್ತು ನನ್ನ ಸಹೋದ್ಯೋಗಿಗಳು ಬಾಂಗ್ಲಾದೇಶದ ವಿಮೋಚನೆಗೆ ಭಾರತದಲ್ಲಿ ಸತ್ಯಾಗ್ರಹ ಮಾಡಿದ್ದೆವು. ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟ ಪ್ರತಿಭಟನೆಯಲ್ಲಿ ಜೈಲಿಗೆ ಕೂಡ ಹೋಗಿದ್ದೆನು ಎಂದಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ಬಾಂಗ್ಲಾ ಸೈನಿಕರಿಗೆ ಜೊತೆಯಾಗಿ ನಿಂತ ಭಾರತೀಯ ಸೈನಿಕರ ಧೈರ್ಯ, ತ್ಯಾಗವನ್ನು ನಾವು ಮರೆಯಬಾರದು ಎಂದು ಇದೇ ವೇಳೆ ಮೋದಿ ನುಡಿದಿದ್ದಾರೆ.

ABOUT THE AUTHOR

...view details