ಕರ್ನಾಟಕ

karnataka

ETV Bharat / bharat

ಮೂರು ದಿನಗಳ ಅಮೆರಿಕ ಪ್ರವಾಸ ಮುಗಿಸಿ ದೆಹಲಿಗೆ ಬಂದಿಳಿದ ನಮೋ.. ನಡ್ಡಾರಿಂದ ಅದ್ಧೂರಿ ಸ್ವಾಗತ

ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕಾಗಮಿಸಿದ್ದಾರೆ. ಪ್ರವಾಸ ವೇಳೆ ಹಲವು ನಾಯಕರ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

pm-modi-returns-to-new-delhi-after-concluding-three-day-visit-to-us
ಮೂರು ದಿನಗಳ ಅಮೆರಿಕ ಪ್ರವಾಸ ಮುಗಿಸಿ ದೆಹಲಿಗೆ ಬಂದಿಳಿದ ನಮೋ

By

Published : Sep 26, 2021, 2:28 PM IST

ನವದೆಹಲಿ: ಸೆಪ್ಟೆಂಬರ್​ 23 ರಿಂದ ಮೂರು ದಿನಗಳ ಅಮೆರಿಕ​ ಪ್ರವಾಸದಲ್ಲಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಭಾರತಕ್ಕೆ ಮರಳಿದ್ದಾರೆ. ದೆಹಲಿಯ ಪಾಲಂ ತಾಂತ್ರಿಕ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಹಲವರು ಸ್ವಾಗತಿಸಿದರು.

ಅಮೆರಿಕದಲ್ಲಿ ಜೋ ಬೈಡನ್​ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಸೆಪ್ಟೆಂಬರ್​ 23 ರಂದು ಅಮೆರಿಕಕ್ಕೆ ತೆರಳಿದ್ದ ಅವರು ಅಂದು​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್​ ಮತ್ತು ಜಪಾನ್​ ಪ್ರಧಾನಿ ಯೋಶಿಹಿದೆ ಸುಗಾರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಕಮಲಾ ಹ್ಯಾರಿಸ್​ಗೆ ಅವರ ತಾತ ಗೋಪಾಲನ್​​ ಅವರಿಗೆ ಸಂಬಂಧಪಟ್ಟ ಅಧಿಸೂಚನೆಯನ್ನು ಉಡುಗೊರೆಯಾಗಿ ಕೊಟ್ಟಿದ್ದರು.

ಎರಡನೇ ದಿನ (ಸೆಪ್ಟೆಂಬರ್​ 24) ಕ್ವಾಡ್​ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇದು ಅಮೆರಿಕ, ಭಾರತ, ಆಸ್ಟ್ರೇಲಿಯಾ, ಜಪಾನ್​ ದೇಶಗಳನ್ನೊಂಡ ಸಂಘಟನೆಯಾಗಿದ್ದು, ನಾಲ್ಕೂ ರಾಷ್ಟ್ರಗಳ ನಾಯಕರು ಭಾಗವಹಿಸಿ, ಜಾಗತಿಕ ಶಾಂತಿ ಸ್ಥಾಪನೆ ಬಗ್ಗೆ ಚರ್ಚಿಸಿದರು. ಅದರಲ್ಲೂ ಮುಖ್ಯವಾಗಿ ಇಂಡೋ-ಫೆಸಿಪಿಕ್​ ಪ್ರದೇಶದ ಅಭಿವೃದ್ಧಿ, ಶಾಂತಿ ಸ್ಥಾಪನೆಯ ಬಗ್ಗೆ ಮಾತುಕತೆ ನಡೆಸಿದರು.

ಇದನ್ನೂ ಓದಿ:ಮನಮೋಹನ್ ಸಿಂಗ್ ಜನ್ಮದಿನ.. ರಾಹುಲ್ ಗಾಂಧಿ, ಪೈಲಟ್, ಗೆಹ್ಲೋಟ್​ರಿಂದ ಶುಭಾಶಯ

ABOUT THE AUTHOR

...view details