ನವದೆಹಲಿ: ಅಜಾದಿ ಕಾ ಅಮೃತ್ ಮಹೋತ್ಸವದ ವಿಶೇಷಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೋಮವಾರ) ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಿದರು. ಈ ವಿಶೇಷ ಸರಣಿಯ ನಾಣ್ಯಗಳು ಆಜಾದಿ ಕಾ ಅಮೃತ್ ಮಹೋತ್ಸವ ಲೋಗೋದ ಥೀಮ್ ಅನ್ನು ಹೊಂದಿದ್ದು, ದೃಷ್ಟಿ ವಿಕಲಚೇತನರು ಕೂಡ ಕೂಡ ಇವುಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ.
ಆಜಾದಿ ಕಾ ಅಮೃತ್ ಮಹೋತ್ಸವ.. ಹೊಸ ನಾಣ್ಯಗಳನ್ನು ಬಿಡುಗಡೆ ಮಾಡಿದ ಪ್ರಧಾನಿ - ಆಜಾದಿ ಕಾ ಅಮೃತ್ ಮಹೋತ್ಸವ
ಆಜಾದಿ ಕಾ ಅಮೃತ್ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ₹1, ₹2, ₹5, ₹10 ಹಾಗೂ ₹20 ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಬಿಡುಗಡೆ ಮಾಡಿದರು.
![ಆಜಾದಿ ಕಾ ಅಮೃತ್ ಮಹೋತ್ಸವ.. ಹೊಸ ನಾಣ್ಯಗಳನ್ನು ಬಿಡುಗಡೆ ಮಾಡಿದ ಪ್ರಧಾನಿ PM Modi Released A Special Series Coins](https://etvbharatimages.akamaized.net/etvbharat/prod-images/768-512-15487516-38-15487516-1654513480888.jpg)
₹1, ₹2, ₹5, ₹10 ಹಾಗೂ ₹20 ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಅವರು ಬಿಡುಗಡೆ ಮಾಡಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವೇಳೆ ಹಾಜರಿದ್ದರು. ನಾಣ್ಯ ಬಿಡುಗಡೆ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹೊಸ ನಾಣ್ಯಗಳು ಜನರಿಗೆ ಅಮೃತ್ ಕಾಲವನ್ನ ನೆನಪಿಸುತ್ತವೆ. ಜೊತೆಗೆ ದೇಶದ ಅಭಿವೃದ್ಧಿಗೆ ಶ್ರಮಿಸಲು ಜನರಿಗೆ ಪ್ರೇರಣೆ ನೀಡುತ್ತವೆ ಎಂದು ಹೇಳಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರದ 12 ಯೋಜನೆಗಳನ್ನೊಳಗೊಂಡ ಜನ್ ಸಮರ್ಥ್ ಯೋಜನೆಗೆ ಪ್ರಧಾನಿ ಐಕಾನಿಕ್ ವೀಕ್ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ್ದಾರೆ. ಪ್ರತಿಯೊಂದು ಯೋಜನೆಗಳನ್ನು ಈ ಪೋರ್ಟಲ್‌ನಲ್ಲಿ ಪ್ರದರ್ಶಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.