ಫಿರೋಜ್ಪುರ್(ಪಂಜಾಬ್): 'ನಾನು ಜೀವಂತವಾಗಿ ಏರ್ಪೋರ್ಟ್ವರೆಗೂ ಬಂದಿರುವುದಕ್ಕೆ ನಿಮ್ಮ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳಿ' ಎಂದು ಭಟಿಂಡಾ ಏರ್ಪೋರ್ಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಂಜಾಬ್ನ ಫಿರೋಜ್ಪುರ್ನಲ್ಲಿ ಪ್ರಚಾರ ಸಭೆಗೆ ತೆರಳುತ್ತಿದ್ದ ವೇಳೆ ಭದ್ರತಾ ಲೋಪದಿಂದಾಗಿ ದಿಢೀರ್ ಆಗಿ ಅವರು ಭಾಗಿಯಾಗಬೇಕಿದ್ದ ರ್‍ಯಾಲಿ ರದ್ದಾಗಿದೆ.
ಇದನ್ನೂ ಓದಿ:15-20 ನಿಮಿಷ ಫ್ಲೈಓವರ್ನಲ್ಲೇ ಸಿಲುಕಿಕೊಂಡ ಮೋದಿ; ಪಂಜಾಬ್‌ನಲ್ಲಿ ಬಹುದೊಡ್ಡ ಭದ್ರತಾ ಲೋಪ
ಆಗಿದ್ದೇನು?
ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಫಿರೋಜ್‌ಪುರಕ್ಕೆ ಪ್ರಧಾನಿ ರಸ್ತೆ ಮಾರ್ಗವಾಗಿ ಸಂಚರಿಸುತ್ತಿದ್ದರು. ಈ ವೇಳೆ ಬೆಂಗಾವಲು ಪಡೆಯೊಂದಿಗೆ ಮೋದಿ ಫ್ಲೈಓವರ್‌ವೊಂದರಲ್ಲೇ ಸುಮಾರು 20 ನಿಮಿಷಗಳ ಕಾಲ ಕಳೆಯಬೇಕಾಯಿತು. ಪ್ರತಿಭಟನಾಕಾರರು ರಸ್ತೆಯಲ್ಲಿ ಅಡಚಣೆ ಉಂಟು ಮಾಡಿದ್ದೇ ಇದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ರ್‍ಯಾಲಿ ರದ್ದುಗೊಳಿಸಲಾಯಿತು.
ಪಂಜಾಬ್ನಿಂದ ದೆಹಲಿಗೆ ತೆರಳುತ್ತಿದ್ದ ವೇಳೆ ಭಟಿಂಡಾ ಏರ್ಪೋರ್ಟ್ನಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಮಾತನಾಡಿರುವ ಮೋದಿ, 'ನಾನು ಏರ್ಪೋರ್ಟ್‌ವರೆಗೆ ಜೀವಂತವಾಗಿ ಬಂದಿರುವುದಕ್ಕೆ ನಿಮ್ಮ ಮುಖ್ಯಮಂತ್ರಿಗೆ ಧನ್ಯವಾದ ತಿಳಿಸಿ' ಎಂದರು.
ಪ್ರಧಾನಿ ಭದ್ರತೆಯಲ್ಲಿ ಲೋಪ ಕಾಣಿಸಿಕೊಳ್ಳುತ್ತಿದ್ದಂತೆ ಬಿಜೆಪಿ ಪಂಜಾಬ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಪೊಲೀಸ್ ವ್ಯವಸ್ಥೆ ಇಷ್ಟೊಂದು ಕೀಳುಮಟ್ಟಕ್ಕೆ ಇಳಿದಿದೆ. ತುರ್ತು ಪರಿಸ್ಥಿತಿ ಬಳಿಕ ಇಂತಹ ದೊಡ್ಡ ತಪ್ಪು ನಡೆದಿರುವುದು ಎರಡನೇ ಸಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟ್ವೀಟ್ ಮಾಡಿ ಟೀಕಿಸಿದ್ದಾರೆ.