ಅಹಮದಾಬಾದ್: ತೌಕ್ತೆ ಚಂಡಮಾರುತ ಅಪ್ಪಳಿಸಿದ ಬಳಿಕ ರಾಜ್ಯದ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್‌ನ ಭಾವನಗರಕ್ಕೆ ಆಗಮಿಸಿ ವೈಮಾನಿಕ ಸಮೀಕ್ಷೆ ಕೈಗೊಂಡರು.
ವೈಮಾನಿಕ ಸಮೀಕ್ಷೆಯ ಬಳಿಕ ಅವರು ಪ್ರವಾಹ ಪೀಡಿತರ ನೆರವಿಗಾಗಿ 1 ಸಾವಿರ ಕೋಟಿ ರೂ. ತಾತ್ಕಾಲಿಕ ಅನುದಾನ ಘೋಷಣೆ ಮಾಡಿದ್ದಾರೆ.
ಮೋದಿ ದೆಹಲಿಯಿಂದ ಭಾವನಗರಕ್ಕೆ ಬಂದಿಳಿದ ಪ್ರಧಾನಿ ಉನಾ, ದಿಯು, ಜಫರಾಬಾದ್ ಮತ್ತು ಮಹುವಾಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಮೀಕ್ಷೆಯ ನಂತರ ಪ್ರಧಾನಿ ಅಹಮದಾಬಾದ್‌ನಲ್ಲಿ ಪರಿಶೀಲನಾ ಸಭೆ ಸಹ ನಡೆಸಿದರು.
ಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಾವಿರ ಕೋಟಿ ರೂ. ಪರಿಹಾರದ ಅನುದಾನ ಘೋಷಣೆ ಮಾಡಿದ್ದಾರೆ.