ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ನ್ಯಾಯ ಮತ್ತು ಅವಿರತ ಹೋರಾಟದ ಪ್ರತೀಕವಾಗಿದ್ದಾರೆ. ತ್ಯಾಗ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಮಾಡಿದ ಅಚಲವಾದ ಸಮರ್ಪಣೆ ನಮ್ಮ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ. ಅವರ ಜನ್ಮದಿನವನ್ನು ಇಂದು ಹೃದಯಪೂರ್ವಕವಾಗಿ ಸ್ಮರಿಸುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾಜಿ ಸಚಿವ ವಿ. ಸೋಮಣ್ಣ ಟ್ವೀಟ್ : ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮಾಡಿರುವ ಸೋಮಣ್ಣ, "ವ್ಯಕ್ತಿಗಳನ್ನು ಕೊಲ್ಲಬಹುದೇ ಹೊರತು ಅವರ ವಿಚಾರವನ್ನಲ್ಲ. ಭಾರತದ ಅನರ್ಘ್ಯ ಕ್ರಾಂತಿ ರತ್ನ, ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರ ಜನ್ಮದಿನದಂದು ಶತ ಶತ ನಮನಗಳು" ಎಂದು ಬರೆದುಕೊಂಡಿದ್ದಾರೆ.
ಬಿ.ಶ್ರೀರಾಮುಲು ಟ್ವೀಟ್ : ಭಾರತೀಯ ಸ್ವಾತಂತ್ರ್ಯ ಚಳುವಳಿಯ ಅನರ್ಘ್ಯ ರತ್ನ ಭಗತ್ ಸಿಂಗ್ ಅವರ ಶೌರ್ಯ ಎಲ್ಲಾ ಪೀಳಿಗೆಗೂ ಪ್ರೇರಣಾಶಕ್ತಿ. ಭಾರತಾಂಬೆಯ ಹೆಮ್ಮೆಯ ಪುತ್ರ ಭಗತ್ ಸಿಂಗ್ ಅವರ ಜನ್ಮದಿನದಂದು ಅನಂತ ಕೋಟಿ ಪ್ರಣಾಮಗಳು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ಜೊತೆಗೆ, ಪ್ರತಾಪ್ ಸಿಂಹ ಕೂಡ ಎಕ್ಸ್ ಆ್ಯಪ್ನಲ್ಲಿ ಭಾರತಾಂಬೆಯ ಹೆಮ್ಮೆಯ ಪುತ್ರ ಭಗತ್ ಸಿಂಗ್ ಅವರ ಜನ್ಮದಿನದಂದು ಶತ ಶತ ನಮನಗಳು ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ :ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್ಸಿಂಗ್ ಹೆಸರು.. ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ ಘೋಷಣೆ