ಕರ್ನಾಟಕ

karnataka

ETV Bharat / bharat

ಪಿ.ವಿ ನರಸಿಂಹ ರಾವ್ ಜನ್ಮ ಶತಮಾನೋತ್ಸವ: ಮಾಜಿ ಪಿಎಂಗೆ ಗೌರವ ಸಲ್ಲಿಸಿದ ಮೋದಿ - ನರಸಿಂಹ ರಾವ್​ಗೆ ಗೌರವ

ಇಂದು ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಜನ್ಮ ಶತಮಾನೋತ್ಸವ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ.

Former PM PV Narasimha Rao
ಪಿ.ವಿ ನರಸಿಂಹ ರಾವ್ ಜನ್ಮದಿನ

By

Published : Jun 28, 2021, 12:23 PM IST

ನವದೆಹಲಿ :ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗೌರವಾರ್ಪಣೆ ಸಲ್ಲಿಸಿದರು. ಇದೇ ವೇಳೆ ಮಾಜಿ ಪ್ರಧಾನಿಯ ಆಡಳಿತ ಮತ್ತು ಸೇವೆಯನ್ನು ಮೋದಿ ಸ್ಮರಿಸಿದ್ದಾರೆ.

ಕಾಂಗ್ರೆಸ್​ನ ಹಿರಿಯ ನಾಯಕರಾಗಿದ್ದ ರಾವ್ ಅವರು, 1991 ರಲ್ಲಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಿ ಐದು ವರ್ಷಗಳ ಕಾಲ ಆಡಳಿತ ನಡೆಸಿದ್ದರು. ಭಾರತದ ಅರ್ಥಿಕತೆಯನ್ನು ಉದಾರೀಕರಣ ಮಾಡಿದ್ದು ರಾವ್ ಅವರ ಪ್ರಮುಖ ಕೊಡುಗೆಯಾಗಿದೆ, ಇದರಿಂದ ದೇಶದಲ್ಲಿ ಹಲವು ಬದಲಾವಣೆಗಳಾದವು.

ರಾವ್ ಜನ್ಮದಿನದ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್ ಅವರ 100ನೇ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ. ದೇಶದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಯನ್ನು ಭಾರತ ಸ್ಮರಿಸುತ್ತದೆ. ರಾವ್ ಅವರು, ಅಗಾಧವಾದ ಜ್ಞಾನ ಮತ್ತು ಬುದ್ಧಿಶಕ್ತಿಯನ್ನು ಹೊಂದಿದ್ದರು ಎಂದು ಬಣ್ಣಿಸಿದ್ದಾರೆ.

ಓದಿ : ವಿಶ್ವದ ಬೃಹತ್ ಲಸಿಕಾ ಅಭಿಯಾನ: ಜಗತ್ತಿನ ದೊಡ್ಡಣ್ಣನನ್ನೇ ಹಿಂದಿಕ್ಕಿ ಮುನ್ನುಗ್ಗುತ್ತಿರುವ ಭಾರತ

ಟ್ವೀಟ್ ಜೊತೆಗೆ ಕಳೆದ ವರ್ಷ ಮನ್​ ಕಿ ಬಾತ್​ ರೇಡಿಯೋ ಕಾರ್ಯಕ್ರಮದಲ್ಲಿ ನರಸಿಂಹ ರಾವ್ ಅವರಿಗೆ ಗೌರವ ಸಲ್ಲಿಸಿದ ಆಡಿಯೋ ಕ್ಲಿಪ್​ವೊಂದನ್ನು ಪ್ರಧಾನಿ ಹಂಚಿಕೊಂಡಿದ್ದಾರೆ.

ಪ್ರಧಾನಿ ಹುದ್ದೇಗೇರಿದ ಹಿಂದಿಯೇತರ ಭಾಷಿಕ :

ಪಂಪುಲಪರ್ತಿ ವೆಂಕಟ ನರಸಿಂಹ ರಾವ್ (ಪಿ.ವಿ. ನರಸಿಂಹ ರಾವ್) ವಕೀಲರು ಮತ್ತು ರಾಜಕಾರಣಿ ಆಗಿದ್ದರು. ಭಾರತೀಯ ಕಾಂಗ್ರೆಸ್​ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ರಾವ್ ಅವರು, 1991 ರಿಂದ 1996 ರ ವರೆಗೆ ದೇಶದ 10 ನೇ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

ಜೂನ್ 28, 1921 ರಂದು ಈಗಿನ ತೆಲಂಗಾಣದ ವಾರಂಗಲ್ ಜಿಲ್ಲೆಯ ನರಸಂಪೇಟ್ ಮಂಡಲದ ಲಕೇನಪಲ್ಲಿ ಗ್ರಾಮದಲ್ಲಿ ನರಸಿಂಹ ರಾವ್ ಜನಿಸಿದ್ದರು. ನಿಯೋಗಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ರಾವ್ ಅವರು, ದೇಶದ ಪ್ರಧಾನಿ ಮಂತ್ರಿ ಹುದ್ದೆಗೇರಿದ ಹಿಂದಿಯೇತರ ಭಾಷಿಕರಲ್ಲಿ ಒಬ್ಬರಾಗಿದ್ದಾರೆ.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ನರಸಿಂಹ ರಾವ್, ಬಳಿಕ ಭಾರತೀಯ ಕಾಂಗ್ರೆಸ್​ ಸೇರಿದ್ದರು. ಆಂಧ್ರ ಪ್ರದೇಶ ಸರ್ಕಾರ ಮುಖ್ಯಮಂತ್ರಿ, ಸಚಿವ ಸ್ಥಾನದಿಂದ ಹಿಡಿದು ದೇಶದ ಪ್ರಧಾನಿಮಂತ್ರಿ ಹುದ್ದೆಯವರೆಗೆ ರಾವ್ ಅವರು ತನ್ನದೇ ಛಾಪು ಮೂಡಿಸಿದ್ದಾರೆ. ದೇಶದ ಆರ್ಥಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ರಾವ್ ಅವರ ಅವಧಿಯಲ್ಲೇ ಆಗಿದ್ದನ್ನು ಸ್ಮರಿಸಬಹುದು.

ABOUT THE AUTHOR

...view details