ನವದೆಹಲಿ:ತಮಿಳುನಾಡಿನ ನೀಲಗಿರಿಯ ಕುನೂರಿನಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಸೇನಾ ಮುಖಂಡ ಬಿಪಿನ್ ರಾವತ್ ಅವರ ಪತ್ನಿ ಸೇರಿ 13 ಮಂದಿ ಸಾವನ್ನಪ್ಪಿದ್ದಾರೆ. ಈಗಾಗಲೇ ಅವರ ಪಾರ್ಥಿವ ಶರೀರಗಳನ್ನ ದೆಹಲಿಯ ಪಾಲಂ ಏರ್ಬೇಸ್ಗೆ ತೆಗೆದುಕೊಂಡು ಬರಲಾಗಿದೆ.
ಪಾರ್ಥಿವ ಶರೀರದ ಅಂತಿಮ ದರ್ಶನ,ಕುಟುಂಬಸ್ಥರಿಗೆ ನಮೋ ಸಾಂತ್ವನ ಪಾಲಂ ಏರ್ಬೇಸ್ನಲ್ಲಿ ಪಾರ್ಥಿವ ಶರೀರಗಳಿಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿದ್ದು, ಅಂತಿಮ ದರ್ಶನ ಪಡೆದುಕೊಂಡರು. ಭಾರತಾಂಬೆಯ ವೀರ ಪುತ್ರರ ದುರಂತ ಅಂತ್ಯಕ್ಕೆ ನಮೋ ಭಾವುಕರಾಗಿದ್ದು, ಈ ವೇಳೆ ಕಂಡು ಬಂತು. ಇದರ ಬಳಿಕ ಯೋಧರ ಕುಟುಂಬಸ್ಥರಿಗೆ ನಮೋ ಸಾಂತ್ವನ ಹೇಳಿದರು.
ಇದನ್ನೂ ಓದಿರಿ:ಹೆಲಿಕಾಪ್ಟರ್ ಪತನ: ದೆಹಲಿ ತಲುಪಿದ ಯೋಧರ ಪಾರ್ಥಿವ ಶರೀರ, ಅಂತಿಮ ದರ್ಶನ ಪಡೆದ ರಾಜನಾಥ್ ಸಿಂಗ್
ಪ್ರಧಾನಿ ಬಳಿಕ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಮುಖ್ಯಸ್ಥ ಅಜಿತ್ ದೋವಲ್, ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅಂತಿಮ ನಮನ ಸಲ್ಲಿಸಿದರು. ಇದರ ಜೊತೆಗೆ ಮೂರು ಸೇನೆಯ ಪಡೆಗಳು ಅಗಲಿದ ವೀರ ಯೋಧರಿಗೆ ಗೌರವ ಸಲ್ಲಿಕೆ ಮಾಡಿದವು.