ನವದೆಹಲಿ:ಛತ್ರಪತಿ ಶಿವಾಜಿ ಮಹಾರಾಜ್ ಜನ್ಮ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮರಾಠ ಯೋಧನಿಗೆ ಗೌರವ ಸಲ್ಲಿಸಿದರು. ಇದೇ ವೇಳೆ ಆತನ ಆಡಳಿತ ಯುಗವು ದೇಶವನ್ನು ಪ್ರೇರೇಪಿಸುತ್ತದೆ ಎಂದೇಳಿದರು.
ಛತ್ರಪತಿ ಶಿವಾಜಿ ಮಹಾರಾಜ್ ಜನ್ಮ ದಿನಾಚರಣೆ: ಮರಾಠ ಯೋಧನಿಗೆ ಗೌರವ ಸಲ್ಲಿಸಿದ ಪಿಎಂ ಮೋದಿ - ಛತ್ರಪತಿ ಶಿವಾಜಿ ಮಹಾರಾಜ್ ಜನ್ಮ ದಿನಾಚರಣೆ
ಇಂದು ಛತ್ರಪತಿ ಶಿವಾಜಿ ಮಹಾರಾಜ್ ಜನ್ಮ ದಿನಾಚರಣೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮರಾಠ ಯೋಧನಿಗೆ ಗೌರವ ಸಲ್ಲಿಸಿದರು.
PM Modi
ಭಾರತ ಮಾತೆಯ ಶ್ರೇಷ್ಠ ಪುತ್ರರಲ್ಲಿ ಶಿವಾಜಿ ಕೂಡ ಒಬ್ಬರು. ಇಂದು ಆ ಮರಾಠ ಯೋಧನ ಜನ್ಮದಿನ. ಅವರಿಗೆ ನಾನು ಗೌರವ ಸಲ್ಲಿಸುತ್ತೇನೆ. ಅವರ ಅದಮ್ಯ ಧೈರ್ಯ, ಅದ್ಭುತ ಶೌರ್ಯ ಮತ್ತು ಅಸಾಧಾರಣ ಬುದ್ಧಿವಂತಿಕೆಯ ಕಥೆಗಳು ದೇಶವಾಸಿಗಳಿಗೆ ಯುಗ ಯುಗದಿಂದ ಸ್ಫೂರ್ತಿ ನೀಡುತ್ತವೆ ಎಂದು ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರು ಮುಂಬೈನಲ್ಲಿ ಮರಾಠ ಯೋಧ ಛತ್ರಪತಿ ಶಿವಾಜಿಗೆ ಗೌರವ ಸಲ್ಲಿಸಿದರು.
TAGGED:
Maratha warrior king