ನವದೆಹಲಿ:ಇಂದು ದೇಶ 24ನೇ ವರ್ಷದ ಕಾರ್ಗಿಲ್ ದಿವಸ್ ಆಚರಿಸುತ್ತಿದೆ. 24 ವರ್ಷಗಳ ಹಿಂದೆ ಇದೇ ದಿನ ಭಾರತೀಯ ವೀರ ಯೋಧರು ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಸದೆಬಡಿದು, ಅವರ ವಶದಲ್ಲಿದ್ದ ಪೋಸ್ಟ್ಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಪರಾಕ್ರಮ ಮೆರೆದಿದ್ದರು.
ಪ್ರಧಾನಿ ಮೋದಿ ಟ್ವೀಟ್ ಮಾಡಿ, "ಕಾರ್ಗಿಲ್ ವಿಜಯ್ ದಿವಸ್ ಭಾರತದ ಧೈರ್ಯಶಾಲಿಗಳ ವೀರಗಾಥೆ ಸ್ಮರಿಸುತ್ತದೆ. ಕಾರ್ಗಿಲ್ ವೀರ ಯೋಧರು ಯಾವಾಗಲೂ ದೇಶವಾಸಿಗಳಿಗೆ ಸ್ಫೂರ್ತಿಯಾಗಿ ಉಳಿಯುತ್ತಾರೆ. ವೀರಯೋಧರಿಗೆ ನಮನಗಳು, ಜೈ ಹಿಂದ್" ಎಂದು ಬರೆದಿದ್ದಾರೆ.
ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದು, "ಕಾರ್ಗಿಲ್ ವಿಜಯ್ ದಿವಸ್ ಕೋಟ್ಯಂತರ ದೇಶವಾಸಿಗಳ ವಿಜಯದ ದಿನ. ಮಾತೃಭೂಮಿಯನ್ನು ರಕ್ಷಿಸಿದ ಸಮಸ್ತ ವೀರ ಯೋಧರಿಗೆ ನಮನ ಸಲ್ಲಿಸುವ ದಿನ. ಭಾರತ ಮಾತೆಯ ವೀರ ಸೈನಿಕರು ಕಾರ್ಗಿಲ್‌ನ ದುರ್ಗಮ ಬೆಟ್ಟಗಳ ಮೇಲೆ ಹೆಮ್ಮೆಯಿಂದ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶದ ಸಮಗ್ರತೆಯನ್ನು ಎತ್ತಿ ಹಿಡಿದ ನಿಮ್ಮ ತ್ಯಾಗಕ್ಕೆ ವಂದಿಸುತ್ತೇನೆ" ಎಂದು ಸ್ಮರಿಸಿದ್ದಾರೆ.