ಲಖನೌ (ಉತ್ತರ ಪ್ರದೇಶ): ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅಂತಿಮ ನಮನ ಸಲ್ಲಿಸಿದ್ದಾರೆ.
ಉತ್ತರ ಪ್ರದೇಶದ ಲಖನೌದಲ್ಲಿರುವ ಕಲ್ಯಾಣ್ ಸಿಂಗ್ ನಿವಾಸದಲ್ಲಿ ಅಂತಿಮಿ ದರ್ಶನಕ್ಕೆ ಏರ್ಪಾಡು ಮಾಡಲಾಗಿದ್ದು, ಪಿಎಂ ಮೋದಿ ಇಲ್ಲಿಗೆ ಆಗಮಿಸಿ ಅಂತಿಮ ಗೌರವ ಸಲ್ಲಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾವು ಒಬ್ಬ ಸಮರ್ಥ ನಾಯಕನನ್ನು ಕಳೆದುಕೊಂಡಿದ್ದೇವೆ. ಅವರ ಮೌಲ್ಯ ಹಾಗೂ ಸಂಕಲ್ಪಗಳನ್ನು ನಾವು ತೆಗೆದುಕೊಳ್ಳಲು ಗರಿಷ್ಠ ಪ್ರಯತ್ನಗಳನ್ನು ಮಾಡಬೇಕು. ಅವರ ಕನಸುಗಳನ್ನು ಈಡೇರಿಸುವಲ್ಲಿ ನಾವು ಯಾವುದೇ ರೀತಿ ಅಡ್ಡಿಪಡಿಸಬಾರದು" ಎಂದು ಹೇಳಿದರು.