ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆದ್ದ 50ನೇ ವಾರ್ಷಿಕೋತ್ಸವದ ನೆನಪಿಗಾಗಿ ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕ ಸ್ಥಳದಲ್ಲಿ ನಡೆಯಲಿರುವ 'ಸ್ವರ್ಣಿಮ್ ವಿಜಯ್ ಮಶಾಲ್ಸ್' ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಬೆಳಗ್ಗೆ 10.30ಕ್ಕೆ ಪ್ರಧಾನಿ ಮೋದಿ ಸಮಾರಂಭದಲ್ಲಿ ಭಾಗವಹಿಸಲಿದ್ದು, ಜ್ಯೋತಿ ಬೆಳಗಿಸಲಿದ್ದಾರೆ. ಕಳೆದ ವರ್ಷವೂ ಕೂಡಾ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪ್ರಧಾನಿ ಮೋದಿ ನಾಲ್ಕು ಜ್ಯೋತಿ ಬೆಳಗಿಸಿದ್ದರು. ಈ ಜ್ಯೋತಿಗಳನ್ನು ಸಿಯಾಚಿನ್, ಕನ್ಯಾಕುಮಾರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಕಚ್ ಸೇರಿದಂತೆ ದೇಶದ ಹಲವಡೆ ಕೊಂಡೊಯ್ಯಲಾಗಿತ್ತು.
ದೇಶದ ಪ್ರಮುಖ ಯುದ್ಧ ಪ್ರದೇಶಗಳಿಗೆ ಮತ್ತು ಸೇನೆಯಲ್ಲಿದ್ದು ಶೌರ್ಯ ಪ್ರಶಸ್ತಿ ವಿಜೇತರಾದವರು ಮತ್ತು 1971ರ ಯುದ್ಧ ಭಾಗವಹಿಸಿದವರ ನಿವಾಸಗಳಿಗೆ ಈ ಜ್ಯೋತಿಗಳನ್ನು ಕೊಂಡೊಯ್ಯಲಾಗಿತ್ತು. ಈಗ ಆ ಜ್ಯೋತಿಗಳನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಇಂದು ನಡೆಯಲಿರುವ ಸಮಾರಂಭದ ವೇಳೆ ಶಾಶ್ವತ ಜ್ಯೋತಿಯೊಂದಿಗೆ ವಿಲೀನಗೊಳಿಸಲಾಗುತ್ತದೆ.
ಪ್ರಧಾನ ಮಂತ್ರಿಗಳ ಕಾರ್ಯಾಲಯದ ಪ್ರಕಾರ, 1971ರ ಯುದ್ಧದಲ್ಲಿ ಭಾರತದ ವಿಜಯ ಮತ್ತು ಬಾಂಗ್ಲಾದೇಶದ ರಚನೆಯ 50 ವರ್ಷಗಳ ಸ್ಮರಣಾರ್ಥವಾಗಿ ಸ್ವರ್ಣಿಮ್ ವಿಜಯ್ ವರ್ಷ್ ಆಚರಣೆಯ ಅಂಗವಾಗಿ, ಕಳೆದ ವರ್ಷ ಡಿಸೆಂಬರ್ 16ರಂದು, ಪ್ರಧಾನ ಮಂತ್ರಿಯವರು ಸ್ವರ್ಣಿಮ್ ವಿಜಯ್ ಮಾಶಾಲ್ ಅನ್ನು ಬೆಳಗಿಸಿದ್ದರು.
ಇದನ್ನೂ ಓದಿ:1971ರ ಭಾರತ-ಪಾಕ್ ಯುದ್ಧ: ಭಾರತೀಯ ಸೇನೆಯ ಪರಾಕ್ರಮದ ಅನಾವರಣ