ಕಾರ್ಗಿಲ್ (ಲಡಾಖ್):ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಕಾರ್ಗಿಲ್ಗೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ವೀರಯೋಧರ ಜೊತೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಅವರು, "ಸಶಸ್ತ್ರ ಪಡೆಗಳಿಗೆ ನಾರಿ ಶಕ್ತಿ ಬೇಕು. ಮಹಿಳಾ ಅಧಿಕಾರಿಗಳ ಸೇರ್ಪಡೆಯಿಂದ ಸೇನೆಯ ಜೊತೆಗೆ, ದೇಶದ ಶಕ್ತಿಯೂ ಹೆಚ್ಚುತ್ತದೆ" ಎಂದರು.
ಸಶಸ್ತ್ರ ಪಡೆಗಳಲ್ಲಾದ ಸುಧಾರಣೆಗಳ ಬಗ್ಗೆ ಮಾತನಾಡುತ್ತಾ, ಶಾಶ್ವತ ಆಯೋಗದ ಅಡಿಯಲ್ಲಿ ಸೇನೆಗೆ ಮಹಿಳಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಇದು ಸೇನೆಯಲ್ಲಾದ ಮಹತ್ತರವಾದ ಸುಧಾರಣೆ. ಕಳೆದ 8 ವರ್ಷಗಳಲ್ಲಿ ಸರ್ಕಾರ ಸಶಸ್ತ್ರ ಪಡೆಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತರಲು ಕೇಂದ್ರ ಒತ್ತು ನೀಡಿದೆ. ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಿಟ್ಟಿದ್ದೇವೆ ಎಂದು ತಿಳಿಸಿದರು.
ಸೇನೆಯೇ ನನ್ನ ಕುಟುಂಬ:ಹಲವು ವರ್ಷಗಳಿಂದ ಸೇನಾಪಡೆಯೇ ನನ್ನ ಕುಟುಂಬವಾಗಿದೆ. ಕಾರ್ಗಿಲ್‌ನಲ್ಲಿ ನಿಮ್ಮೊಂದಿಗೆ ದೀಪಾವಳಿ ಆಚರಣೆ ಮಾಡುವುದೇ ನನಗೆ ಸೌಭಾಗ್ಯದ ಸಂಗತಿ ಎಂದು ಮೋದಿ ಹರ್ಷ ವ್ಯಕ್ತಪಡಿಸಿದರು.