ಕರ್ನಾಟಕ

karnataka

ETV Bharat / bharat

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮಹಿಳಾ ಬಾಕ್ಸರ್‌ಗಳನ್ನು ಭೇಟಿಯಾದ ಮೋದಿ

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮಹಿಳಾ ಬಾಕ್ಸರ್‌ಗಳಾದ ನಿಖತ್ ಜರೀನ್, ಮನೀಶಾ ಮೌನ್ ಮತ್ತು ಪರ್ವೀನ್ ಹೂಡಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ಮಾಡಿದರು.

PM Modi Meets Women Boxers Who Won Medals At World Championship
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮಹಿಳಾ ಬಾಕ್ಸರ್‌ಗಳನ್ನು ಭೇಟಿ ಮಾಡಿದ ಪ್ರಧಾನಿ

By

Published : Jun 1, 2022, 8:07 PM IST

ನವದೆಹಲಿ: ಕಳೆದ ತಿಂಗಳು ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮಹಿಳಾ ಬಾಕ್ಸರ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ಮಾಡಿದರು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಚಾಂಪಿಯನ್‌ಶಿಪ್‌ ಇದಾಗಿದ್ದು, ಭಾರತ ಒಂದು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಜಯಿಸಿದೆ. ಈ ಸಾಧಕರೊಂದಿಗೆ ಪ್ರಧಾನಿ ಮೋದಿ ಕೆಲ ನಿಮಿಷಗಳ ಕಾಲ ಚರ್ಚೆ ನಡೆಸಿದರು.

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮಹಿಳಾ ಬಾಕ್ಸರ್‌ಗಳಾದ ನಿಖತ್ ಜರೀನ್, ಮನೀಶಾ ಮೌನ್ ಮತ್ತು ಪರ್ವೀನ್ ಹೂಡಾ ಈ ಸಾಧನೆ ಮಾಡಿದ ಸಾಧಕರಾಗಿದ್ದು, ಅವರನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ಮಾಡಿದರು. ಭೇಟಿ ವೇಳೆ ಪ್ರಧಾನಿ ಮೋದಿ ಅವರ ಸಾಧನಾ ಹಾದಿ ಬಗ್ಗೆ ಮಾಹಿತಿ ಕಲೆ ಹಾಕಿದರು.

ನಿಖತ್ ಜರೀನ್ ಅವರು ಮೇರಿ ಕೋಮ್, ಸರಿತಾ ದೇವಿ, ಜೆನ್ನಿ ಆರ್‌ಎಲ್ ಮತ್ತು ಲೇಖಾ ಕೆಸಿ ಅವರನ್ನು ಸೇರಿಕೊಂಡು ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಐದನೇ ಭಾರತೀಯ ಬಾಕ್ಸರ್ ಎನಿಸಿಕೊಂಡರು. ಮನೀಶಾ ಮೌನ್ ಮತ್ತು ಪರ್ವೀನ್ ಹೂಡಾ ಕ್ರಮವಾಗಿ 57 ಕೆಜಿ ಮತ್ತು 63 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು.

ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕೊನೆಯ ಚಿನ್ನದ ಪದಕವು 2018 ರಲ್ಲಿ ಬಂದಿತ್ತು. ಮೇರಿ ಕೋಮ್ ಲೈಟ್ ಫ್ಲೈವೇಟ್ ವಿಭಾಗದಲ್ಲಿ (45-48 ಕೆಜಿ) ಅಂದು ಉಕ್ರೇನ್‌ನ ಹನ್ನಾ ಒಖೋಟಾ ಅವರನ್ನು ಸೋಲಿಸಿದ್ದರು. ಅದಾದ ಬಳಿಕ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಈ ಚಿನ್ನದ ಪದಕ ಬಂದಿದೆ.

ABOUT THE AUTHOR

...view details