ನವದೆಹಲಿ: ಜಪಾನ್ನಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿ ಭಾರತದ ಕೀರ್ತಿ ಪತಾಕೆ ಹಾರಿಸಿರುವ ಭಾರತದ ಅಥ್ಲೀಟ್ಸ್ ಜೊತೆ ಪ್ರಧಾನಿ ನರೇಂದ್ರ ಮೋದಿ ಉಪಹಾರದಲ್ಲಿ (ಬ್ರೇಕ್ಫಾಸ್ಟ್) ಭಾಗಿಯಾದರು.
ಈ ವೇಳೆ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ, ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ತಮ್ಮಿಷ್ಟದ ತಿಂಡಿ ಸವಿದು, ಖುಷಿಪಟ್ಟರು.
ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಜೊತೆ ಪ್ರಧಾನಿ ಭಾರತದ ಅಥ್ಲೀಟ್ಸ್ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗಲು ತೆರಳುವುದಕ್ಕೂ ಮುನ್ನ ಎಲ್ಲರೊಂದಿಗೆ ಮೋದಿ ಸಂವಾದ ನಡೆಸಿ ಧೈರ್ಯ ತುಂಬಿದ್ದರು. ಇದೇ ವೇಳೆ, ಕ್ರೀಡಾಕೂಟದಿಂದ ವಾಪಸ್ ಬಂದ ಬಳಿಕ ಪಿ.ವಿ ಸಿಂಧು ಜೊತೆಗೆ ಐಸ್ ಕ್ರೀಂ ಸವಿಯುವುದಾಗಿ ಮೋದಿ ಭರವಸೆ ನೀಡಿದ್ದರು. ಅದರಂತೆ ಕಂಚಿನ ಪದಕ ವಿಜೇತೆ ಜೊತೆ ಪ್ರಧಾನಿ ಮೋದಿ ಇಂದು ಐಸ್ ಕ್ರೀಂ ಸವಿದರು.
ಟೋಕಿಯೋ ಒಲಿಂಪಿಕ್ಸ್ ಅಥ್ಲೀಟ್ಸ್ ಜೊತೆ ಪ್ರಧಾನಿ ಮೋದಿ ಇದೇ ವೇಳೆ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿರುವ ನೀರಜ್ ಚೋಪ್ರಾ ಅವರ ಜೊತೆಗೆ ಮೋದಿ ಚೂರ್ಮಾ (churma) ಸೇವಿಸಿದರು. ಪ್ರಧಾನಿ ನಿವಾಸದಲ್ಲಿ ಆಯೋಜನೆಗೊಂಡಿದ್ದ ಸಮಾರಂಭಕ್ಕೆ ಎಲ್ಲ ಒಲಿಂಪಿಕ್ಸ್ ಕ್ರೀಡಾಪಟುಗಳು ಆಗಮಿಸಿದ್ದರು.
ಕ್ರೀಡಾಪಟುವಿನೊಂದಿಗೆ ನಮೋ ಮಾತು ಇದಕ್ಕೂ ಮೊದಲು ಕ್ರೀಡಾಪಟುಗಳು ನಿನ್ನೆ ಕೆಂಪುಕೋಟೆಯಲ್ಲಿ ನಡೆದ 75ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಒಟ್ಟು 7 ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಗೆದ್ದು ಹೊಸ ದಾಖಲೆ ಬರೆದಿದೆ. ವಿಶೇಷವೆಂದರೆ, 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ನೀರಜ್ ಚೋಪ್ರಾ ಜಾವೆಲಿನ್‌ನಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು.