ಗಾಂಧಿನಗರ (ಗುಜರಾತ್): ಗುಜರಾತ್ ವಿಧಾನಸಭೆಯ ಎರಡನೇ ಹಂತದ 93 ಸ್ಥಾನಗಳಿಗೆ ಸೋಮವಾರ ಮತದಾನ ನಡೆಯಲಿದೆ. ಪ್ರಧಾನಿ ಮೋದಿ ತಮ್ಮ ಮತದಾನ ಹಕ್ಕು ಚಲಾಯಿಸಲಿದ್ದಾರೆ. ಇದಕ್ಕೂ ಮುನ್ನ ದಿನವಾದ ಭಾನುವಾರ ಪ್ರಧಾನಿ ಮೋದಿ ತಮ್ಮ ತಾಯಿ ಹೀರಾಬೆನ್ ಅವರನ್ನು ಭೇಟಿ ಮಾಡಿದರು.
ಗಾಂಧಿನಗರದಲ್ಲಿರುವ ನಿವಾಸಕ್ಕೆ ಆಗಮಿಸಿದ ಪ್ರಧಾನಿ ಮೋದಿ ತಾಯಿ ಹೀರಾಬೆನ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ತಾಯಿಯ ಪಾದಗಳನ್ನು ಸ್ಪರ್ಶಿಸಿ ನಮಸ್ಕಾರ ಮಾಡಿದರು. ಇದೇ ವೇಳೆ ಅಮ್ಮನ ಪಕ್ಕ ಕುಳಿತು ಪ್ರಧಾನಿ ಮೋದಿ ಚಹಾ ಸಹ ಸೇವಿಸಿದರು.
ಇತ್ತ, ಗುಜರಾತ್ನ ಎರಡನೇ ಹಂತದ ಮತದಾನಕ್ಕೆ ಎಲ್ಲ ಅಂತಿಮ ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿ ಮೋದಿ ಅವರು ಸೋಮವಾರ ಬೆಳಗ್ಗೆ 8:30ಕ್ಕೆ ಅಹಮದಾಬಾದ್‌ನ ಸಬರಮತಿ ಅಸೆಂಬ್ಲಿಯ ರಾನಿಪ್ ಪ್ರದೇಶದ ನಿಶಾನ್ ಶಾಲೆಯಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರಧಾನಿಯವರ ಭದ್ರತೆಯ ಶಿಷ್ಟಾಚಾರದ ಪ್ರಕಾರ ಎಸ್‌ಪಿಜಿ ಮತ್ತು ಅಹಮದಾಬಾದ್ ನಗರದ ಉನ್ನತ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಗುಜರಾತ್ ಮೊದಲ ಹಂತದ ಮತದಾನ ಅಂತ್ಯ: 2017ಕ್ಕಿಂತ ಈ ಬಾರಿ ಕಡಿಮೆ ವೋಟಿಂಗ್.. ಕಾರಣವೇನು?