ಕರ್ನಾಟಕ

karnataka

ETV Bharat / bharat

ಯಾವುದೇ ಕಾರಣಕ್ಕೂ ಗಾಬರಿಯಾಗ್ಬೇಡಿ, ಕೋವಿಡ್ ವಿರುದ್ಧ ಲಸಿಕೆ ಅತ್ಯುತ್ತಮ ಅಸ್ತ್ರ: ಮೋದಿ - ಸಿಎಂಗಳೊಂದಿಗೆ ಪ್ರಧಾನಿ ಮೋದಿ ಸಭೆ

ದೇಶದಲ್ಲಿ ಕೊರೊನಾ ಮಹಾಮರಿ ಅಬ್ಬರಿಸುತ್ತಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಸಂಜೆ ಮಹತ್ವದ ವರ್ಚುವಲ್ ಸಭೆ ನಡೆಸಿದರು.

PM Modi meets chief ministers over Covid situation
PM Modi meets chief ministers over Covid situation

By

Published : Jan 13, 2022, 7:02 PM IST

Updated : Jan 13, 2022, 7:19 PM IST

ನವದೆಹಲಿ:ದೇಶದಲ್ಲಿ ಮೂರನೇ ಹಂತದ ಕೋವಿಡ್ ಅಲೆ ಜೋರಾಗಿದೆ. ಪ್ರತಿದಿನ ಲಕ್ಷಾಂತರ ಹೊಸ ಹೊಸ ಸೋಂಕಿತ ಪ್ರಕರಣಗಳು ದಾಖಲಾಗ್ತಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಸಜೆ ಸಭೆ ನಡೆಸಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ಕೋವಿಡ್ ವಿರುದ್ಧ ಲಸಿಕೆ ಅತ್ಯುತ್ತಮ ಅಸ್ತ್ರ. ಯಾವುದೇ ಕಾರಣಕ್ಕೂ ಭಯ, ಗಾಬರಿಯಾಗಬೇಡಿ ಎಂದರು.

ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪಿಎಂ ವಿಡಿಯೋ ಕಾನ್ಫರೆನ್ಸ್​

ವೈದ್ಯಕೀಯ ಮೂಲಸೌಕರ್ಯ ಉನ್ನತೀಕರಣಕ್ಕಾಗಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ 23 ಸಾವಿರ ಕೋಟಿ ರೂ. ಪ್ಯಾಕೇಜ್​ ನೀಡಿದೆ. ಎಲ್ಲರಿಗೂ ಚಿಕಿತ್ಸಾ ಸೌಲಭ್ಯ ಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಅವರು ಮನವಿ ಮಾಡಿದರು.

ಈ ಹಿಂದಿನ ಕೋವಿಡ್ ರೂಪಾಂತರಗಳಿಗೆ ಹೋಲಿಕೆ ಮಾಡಿದಾಗ ಒಮಿಕ್ರಾನ್​ ವೇಗವಾಗಿ ಹರಡುತ್ತಿದೆ. ಆರೋಗ್ಯ ತಜ್ಞರು ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದಾರೆ. ನಾವು ಜಾಗರೂಕರಾಗಿರಬೇಕು ಎಂದಿರುವ ಮೋದಿ, ಯಾವುದೇ ಭಯ, ಆತಂಕ ಬೇಡ ಎಂದರು. ಸಾಂಕ್ರಾಮಿಕದ ವಿರುದ್ಧ ಹೋರಾಡಲು ಮನೆಯಲ್ಲಿ ತಯಾರಿಸುವ ಮನೆಮದ್ದೂ ಸಹ ಉಪಯೋಗಕಾರಿ. ಹಾಗಾಗಿ, ಹೋಂ ಐಸೋಲೇಷನ್​ನಲ್ಲಿ ಇದ್ದುಕೊಂಡೇ ಕೋವಿಡ್ ವಿರುದ್ಧ ಜಯ ಸಾಧಿಸಬಹುದು ಎಂದು ಧೈರ್ಯ ತುಂಬಿದರು.

ಹಬ್ಬದ ಸಂದರ್ಭಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡದಂತೆ ಮನವಿ ಮಾಡಿರುವ ಪ್ರಧಾನಿ, ಕೇಂದ್ರ, ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವಂತೆಯೂ ತಿಳಿಸಿದ್ದಾರೆ.

ದೇಶದಲ್ಲಿ ಕೊರೊನಾ, ಒಮಿಕ್ರಾನ್ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ, 15 ವರ್ಷ ಮೇಲ್ಪಟ್ಟವರಿಗೂ ವ್ಯಾಕ್ಸಿನ್ ನೀಡಲಾಗುತ್ತಿದೆ.

ಇಂದು ನಡೆದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಮಾನ್ಸುಖ್ ಮಾಂಡವಿಯಾ ಭಾಗಿಯಾಗಿದ್ದರು.

Last Updated : Jan 13, 2022, 7:19 PM IST

ABOUT THE AUTHOR

...view details